ಕರ್ನಾಟಕ

ಬಡವರ ಫ್ರಿಡ್ಜ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

Pinterest LinkedIn Tumblr


ಬೆಂಗಳೂರು: ಕೃಷಿಮೇಳದಲ್ಲಿ ಬಡವರ ಫ್ರಿಡ್ಜ್‌ ಜನಾಕರ್ಷಣೆ ಪಡೆಯಿತು. ಈ ವಿಜ್ಞಾನಿಗಳು ‘ತರಕಾರಿ ಸಂಗ್ರಹಣಾ ಸಾಧನ’ ಎಂದು ಹೆಸರಿಟ್ಟಿದ್ದಾರೆ. ಇದರಲ್ಲಿ ಶೂನ್ಯ ಶಕ್ತಿ ಶೇಖರಣಾ ಘಟಕವಿದ್ದು, ಇದಕ್ಕೆ ವಿದ್ಯುತ್‌ನ ಅವಶ್ಯಕತೆ ಇಲ್ಲ. ಇದರಲ್ಲಿ ಸೊಪ್ಪು ತರಕಾರಿಯನ್ನು ಎರಡು ಮೂರು ದಿನ ಹಾಗೂ ಇತರೆ ತರಕಾರಿಗಳನ್ನು ನಾಲ್ಕರಿಂದ ಐದು ದಿನಗಳವರೆಗೆ ತಾಜಾ ಆಗಿರುವಂತೆ ಶೇಖರಿಸಿಡಬಹುದು.

ಈ ಶೈತ್ಯಾಗಾರ ಮೂರು ಅಡಿ ಎತ್ತರವಿದ್ದು, ಕಬ್ಬಿಣದಿಂದ ತಯಾರಿಸಲಾಗಿದೆ. ಅದಕ್ಕೆ ಸುತ್ತಲೂ ರಂದ್ರಗಳಿದ್ದು, ರಂದ್ರಗಳ ಮೂಲಕ ಗಾಳಿ ಒಳಗಡೆ ಹೋಗುತ್ತದೆ. ಒಳಗಡೆ ಸುತ್ತಲೂ ಬತ್ತದ ಹುಲ್ಲು ಹಾಕಲಾಗಿದೆ. ಆ ಹುಲ್ಲಿನ ಮೇಲೆ ಹನಿ ಹನಿ ನೀರು ಬೀಳುತ್ತದೆ. ಅದರಿಂದ ಒಳಗಿರುವ ಆಹಾರ ಪದಾರ್ಥಗಳು, ತರಕಾರಿ ಕೆಡುವುದಿಲ್ಲ ಎನ್ನುತ್ತಾರೆ ರೈತ ರವಿಕುಮಾರ್‌.

Comments are closed.