ಅಂತರಾಷ್ಟ್ರೀಯ

ಟ್ರಂಪ್‌ ಪುತ್ರಿ ಇವಾಂಕಾ ಭಾರತ ಪ್ರವಾಸಕ್ಕೆ ಸಜ್ಜು: ಹೈದರಾಬಾದ್ ಅರಮನೆ ಪಕ್ಕ ತೀವ್ರ ತಪಾಸಣೆ

Pinterest LinkedIn Tumblr


ಹೈದರಾಬಾದ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುತ್ರಿ ಇವಾಂಕಾ ನವೆಂಬರ್‌ 27ರಂದು ಭಾರತಕ್ಕೆ ಆಗಮಿಸುತ್ತಿದ್ದಾರೆ.

ಹೈದರಾಬಾದ್‌ನ ಐತಿಹಾಸಿಕ ಅರಮನೆಗೆ ಇವಾಂಕಾ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡುವ ಕಾರ್ಯಕ್ರಮವೂ ಇದೆ.

ಈ ನಿಟ್ಟಿನಲ್ಲಿ ಹೈದರಾಬಾದ್‌ನ ಅರಮನೆ ಸುತ್ತಮುತ್ತಲು ತೀವ್ರ ತಪಾಸಣೆ ನಡೆಸಲಾಗುತ್ತಿದೆ. ನಕ್ಸಲ್‌ ವಿರೋಧಿ ಪಡೆಯಾದ ಗ್ರೇ ಹೌಂಡ್‌ ಹಾಗೂ ಭಯೋತ್ಪಾದನಾ ನಿಗ್ರಹ ದಳ ಆಕ್ಟೋಪಸ್‌ ಪಡೆ ಯೋಧರು ಇಡೀ ಅರಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿರುವ ಪ್ರತಿ ಮನೆ ತಪಾಸಣೆ ನಡೆಸಿದ್ದಾರೆ.

ವಿಶೇಷ ಭದ್ರತಾ ಪಡೆ ಹಾಗೂ ಅಮೆರಿಕ ಗುಪ್ತದಳ ಯೋಧರು ಫಾತಿಮಾ ನಗರ್‌, ಫಾರೂನಿ ನಗರ್‌, ಅಲ್‌ ಜುಬಾಲಿ ಕಾಲೋನಿ, ಇವಾಂಕಾ ಭೇಟಿ ನೀಡುವ ಚಾರ್‌ಮಿನಾರ್‌, ಲಾಡ್‌ ಬಜಾರ್‌, ಚೌಮಾಹಹಳ್ಳ ಪ್ಯಾಲೇಸ್‌ನಲ್ಲಿಯೂ ತಪಾಸಣೆ ನಡೆಸಲಾಗಿದೆ.

ಈ ಕುರಿತು ವಿಜಯ ಕರ್ನಾಟಕ ಸೋದರ ಸಂಸ್ಥೆ ಟೈಮ್ಸ್‌ ಆಫ್‌ ಇಂಡಿಯಾಗೆ ಮಾಹಿತಿ ನೀಡಿದ ದಕ್ಷಿಣ ವಲಯ ಪೊಲೀಸ್‌ ಉಪ ಆಯುಕ್ತ ವಿ. ಸತ್ಯನಾರಾಯಣ, ಆಕ್ಟೋಪಸ್‌, ಗ್ರೇ ಹೌಂಡ್‌ ದಳದ ಯೋಧರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮೊದಲು ಇವರು ಸಂಪೂರ್ಣ ತಪಾಸಣೆ ನಡೆಸಲಿದ್ದಾರೆ ಎಂದರು.

Comments are closed.