ಕರ್ನಾಟಕ

ಸುವರ್ಣ ಸೌಧ ಮುಂದೆ ಕುರಿ ಮಂದೆಯೊಂದಿಗೆ ಪ್ರತಿಭಟನೆ

Pinterest LinkedIn Tumblr


ಬೆಳಗಾವಿ: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಸುವರ್ಣ ವಿಧಾನಸೌಧಕ್ಕೆ ಕುರಿಗಳನ್ನು ನುಗ್ಗಿಸಲು ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಬುಧವಾರ ಮಧ್ಯಾಹ್ನ ಕುರಿ ಸಾಗಿಸುವ ನೆಪದಲ್ಲಿ ರಾಷ್ಟ್ರಿಯ ಹೆದ್ದಾರಿ ಪ್ರವೇಶಿಸಿದ ಪ್ರತಿಭಟನಾಕಾರರು ಸುವರ್ಣಸೌಧದ ದ್ವಾರದ ಬಳಿ ಕುರಿ ನುಗ್ಗಿಸಲು ಯತ್ನಿಸಿದರು.

ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಅವರನ್ನು ತಡೆದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

ಪರಿಸ್ಥಿತಿ ಮಿತಿಮೀರಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಬಳಿಕ 25 ಪ್ರತಿಭಟನಾಕಾರರನ್ನು ಬಂಧಿಸಿದರು.

ಆದರೆ, ಹೆದ್ದಾರಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ಕುರಿಗಳನ್ನು ಹೊರಹಾಕಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಲಾಠಿ ಬೀಸಿದರೂ ಕುರಿಗಳು ರಸ್ತೆ ಬಿಡಲಿಲ್ಲ. ಕೊನೆಗೆ ಸಮಾಧಾನದಿಂದ ಕುರಿಗಳನ್ನು ಹೆದ್ದಾರಿಯಿಂದ ಹೊರಹಾಕಿದರು. ಈ ವೇಳೆ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ಪ್ರತಿಭಟನಾಕಾರರು ಬಳಿಕ ಸುವರ್ಣ ಗಾರ್ಡನ್ ನಲ್ಲಿ ಪ್ರತಿಭಟನೆ ಮುಂದುವರಿಸಿದರು. ಪೊಲೀಸರ ಬಂಧನದಿಂದ ಕೆಲಹೊತ್ತಿನ ಬಳಿಕ ಬಿಡುಗಡೆಗೊಂಡ ಪ್ರತಿಭಟನಾಕಾರರು ಕೂಡ ಗುಂಪು ಸೇರಿಕೊಂಡರು.

Comments are closed.