ಮಂಡ್ಯ : ‘ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಕರೆಯದೇ ಕಾರ್ಯಕ್ರಮಕ್ಕೆಹೋಗುವುದಕ್ಕೆ ಆಗುತ್ತದಾ?’ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಗ್ರಾಮೀಣ ಅಭಿವೃದ್ಧಿ ಯೋಜನೆಯ ಮಹಾ ಸಮಾವೇಶದ ಕುರಿತು ನೀಡಿದ ಪ್ರತಿಕ್ರಿಯೆ.
ತೂಬಿನಕೆರೆಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ’ಅದು ಧರ್ಮಸ್ಥಳದವರು ನಡೆಸುತ್ತಿರುವ ಖಾಸಗಿ ಕಾಯಕ್ರಮ. ನನ್ನನ್ನು ಕರೆದಿಲ್ಲ,ಕರೆದಿದ್ದರೆ ಹೋಗುತ್ತಿದ್ದೆ.ಕರೆಯದೇ ಹೊಗಲಿಕ್ಕೆ ಆಗುತ್ತದಾ?’ ಎಂದು ಪರೋಕ್ಷ ಅಸಮಧಾನ ಹೊರಹಾಕಿದರು.
ಇದೇ ವೇಳೆ ‘ಮೋದಿ ಅವರ ಭೇಟಿ ಕರ್ನಾಟಕದ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದರು.
-ಉದಯವಾಣಿ