ಕರ್ನಾಟಕ

ದೇಹದ ಜೊತೆಗೆ ಮೆದುಳನ್ನು ಕೂಡ ಆರೋಗ್ಯವಾಗಿರಿಸುವಂತಹ ಆಹಾರಗಳ ಪಟ್ಟಿ

Pinterest LinkedIn Tumblr

ಮಂಗಳೂರು: ಗಡಿಬಿಡಿಯ ಬದುಕಲ್ಲಿ ನಮ್ಮ ಅರೋಗ್ಯದ ಬಗ್ಗೆ ಗಮನ ಹರಿಸಲು ಸಮಯವೇ ಇರುವುದಿಲ್ಲ. ಇದರಿಂದ ಅನೇಕ ಬಗೆಯ ಕಾಯಿಲೆಗಳು ಉಂಟಾಗುತ್ತದೆ. ಅದರಲ್ಲೂ ನಾವು ದೇಹದ ಜೊತೆಗೆ ಮೆದುಳಿನ ಆರೋಗ್ಯದ ಬಗ್ಗೆಯೂ ನಿರ್ಲಕ್ಷ್ಯ ವಹಿಸುತ್ತೇವೆ. ಇದರಿಂದ ಜ್ಞಾಪಕ ಶಕ್ತಿ ಕುಂಠಿತವಾಗುವುದಲ್ಲದೆ , ಕೆಲಸದಲ್ಲಿ ನಿರಾಸಕ್ತಿ ಉಂಟಾಗುತ್ತದೆ . ಇದರಿಂದ ದೂರವಾಗಲು ನಾವು ಕೆಲವು ಸಂಗತಿಗಳ ಕಡೆಗೆ ಗಮನ ನೀಡುವುದು ಅತ್ಯಗತ್ಯ.

*ಸೇವಿಸುವ ಆಹಾರದಲ್ಲಿ ಮೀನು ಇರಲೇ ಬೇಕು. ಇದರಲ್ಲಿರುವ ಒಮೆಗಾ ತ್ರಿ ಫ್ಯಾಟಿ ಆಸಿಡ್ ಗಳು ಆಗ್ಯವನ್ನು ಕಾಪಾಡುವುದಲ್ಲದೆ ಮೆದುಳಿನ ಕಾರ್ಯತತ್ಪರತೆಯನ್ನು ಸುಗಮವಾಗಿಡುತ್ತದೆ.
* ಹಸಿರು ಸೊಪ್ಪು ಆಹಾರದ ಭಾಗವಾಗಿರಲಿ. ಇದು ಆಂಟಿ ಆಕ್ಸಿಡೆಂಟ್ ಉತ್ಪತ್ತಿ ಮಾಡುತ್ತದೆ. ಅಲ್ಲದೆ ಮೆದುಳಿನಲ್ಲಿ ಉತ್ಪತ್ತಿ ಆಗುವ ವಿಷಕಾರಕಗಳನ್ನು ನಾಶ ಮಾಡುತ್ತದೆ.
* ಪಿಷ್ಟ ಪದಾರ್ಥಗಳಿಂದ ದೇಹಕ್ಕೆ ಶಕ್ತಿ ದೊರಕುತ್ತದೆ. ಆದ್ದರಿಂದ ಅದನ್ನು ಪಡೆಯಲು ರಾಗಿ , ಜೋಳದಂತಹ ಕಾಲುಗಳ ಹಿಟ್ಟನ್ನು ಬಳಸಿ.
* ಒಣ ಹಣ್ಣು ಮತ್ತು ಬೀಜಗಲಾದ ಗೋಡಂಬಿ, ಅಕ್ರೂಟು, ಪಿಸ್ತಾ, ದ್ರಾಕ್ಷಿ ಯಂತಹವನ್ನು ಪ್ರತಿದಿನ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ ಇದು ಸಹ ನಿಮ್ಮ ಮೆದುಳಿನ ಆರೋಗ್ಯ ಕಾಪಾಡುತ್ತದೆ.

ಮಾಹಿತಿ:ಫೆಸ್‌ಬುಕ್

Comments are closed.