ಕರ್ನಾಟಕ

ಯಾವ ಚಹಾ ಯಾವಾಗ ಕುಡಿದರೆ ಆರೋಗ್ಯಕ್ಕೆ ಉತ್ತಮ

Pinterest LinkedIn Tumblr

green-tea

ಮಂಗಳೂರು: ನಾವು ತಿನ್ನುವ ಪ್ರತಿಯೊಂದು ಆಹಾರದ ಬಗ್ಗೆ ದಿನಕ್ಕೊಂದು ಅಧ್ಯಯನ ಹಾಗೂ ಸಂಶೋಧನೆಗಳು ನಡೆಯುತ್ತಲೇ ಇರುತ್ತದೆ. ಚಹಾದ ಬಗ್ಗೆ ನಡೆಸಿರುವ ಕೆಲವೊಂದು ಸಂಶೋಧನೆಗಳು ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿವೆ. ಆದರೆ ಇನ್ನು ಕೆಲವು ಅಧ್ಯಯನಗಳು ಚಹಾ ಕೂಡ ಆರೋಗ್ಯಕಾರಿ ಎಂದು ಹೇಳಿವೆ.

ಆದರೆ ವ್ಯಾಯಾಮದ ಬಳಿಕ ಯಾವ ಚಹಾ ಕುಡಿಯಬೇಕು ಎನ್ನುವ ಬಗ್ಗೆ ಹೆಚ್ಚಿನವರಿಗೆ ಗೊಂದಲವಿದೆ. ಹಸಿರು ಚಹಾ(ಗ್ರೀನ್ ಟೀ), ಕಪ್ಪು ಚಹಾ, ಹರ್ಬಲ್(ಗಿಡಮೂಲಿಕೆ) ಚಹಾ ಮತ್ತು ಶುಂಠಿ ಚಹಾ ಹೀಗೆ ಹಲವಾರು ವಿಧದ ಚಹಾಗಳಿವೆ. ಈ ಎಲ್ಲಾ ಚಹಾಗಳನ್ನು ವ್ಯಾಯಾಮದ ಮೊದಲು ಅಥವಾ ಬಳಿಕ ಕುಡಿಯಬಹುದಾಗಿದೆ.

ಇದು ಆರೋಗ್ಯಕಾರಿ ಹಾಗೂ ದೇಹಕ್ಕೆ ಶಕ್ತಿಯನ್ನು ನೀಡುವುದು. ಈ ಚಹಾಗಳನ್ನು ಕುಡಿದರೆ ಶಕ್ತಿ ಹೆಚ್ಚಾಗಿ ಕೊಬ್ಬು ಕರಗುವುದು. ವ್ಯಾಯಮದ ಬಳಿಕ ಕುಡಿಯಬೇಕಾದ ಚಹಾಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳುವ….

ತೂಕ ಕಳೆದುಕೊಳ್ಳಲು ಇದು ಅತ್ಯುತ್ತಮವಾದ ಗಿಡಮೂಲಿಕೆ ಚಹಾ. ವ್ಯಾಯಾಮದ ಮೊದಲು ಅಥವಾ ಬಳಿಕ ಗ್ರೀನ್ ಟೀ ಕುಡಿದರೆ ಅದರಿಂದ ಕೊಬ್ಬು ಕರಗಿ ದೇಹವು ಶಕ್ತಿಯನ್ನು ಪಡೆಯುವುದು. ಗ್ರೀನ್ ಟೀಯಲ್ಲಿರುವ ಕೆಫಿನ್ ತೂಕ ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ. ಪ್ರತಿದಿನ ಗ್ರೀನ್ ಟೀ ಸೇವಿಸಿದರೆ ಖಂಡಿತ ಮೋಸವಿಲ್ಲ..!

ಗ್ರೀನ್ ಟೀಯಲ್ಲಿರುವ ಕೆಫಿನ್ ಹಸಿವನ್ನು ನಿಯಂತ್ರಿಸಿ, ಕ್ಯಾಲರಿ ದಹಿಸಿ ದೇಹದಲ್ಲಿರುವ ಹೆಚ್ಚುವರಿ ನೀರನ್ನು ತೆಗೆಯುತ್ತದೆ. ವ್ಯಾಯಾಮದ ಬಳಿಕ ಗ್ರೀನ್ ಟೀ ಕುಡಿದರೆ ಚಯಾಪಚಾಯ ಕ್ರಿಯೆ ಸುಧಾರಣೆಯಾಗಿ ಇದರಲ್ಲಿರುವ ಆಯಂಟಿಆಕ್ಸಿಡೆಂಟ್ ಕ್ಯಾಲರಿ ದಹಿಸಲು ನೆರವಾಗುತ್ತದೆ.

ವ್ಯಾಯಮ ಮಾಡಿದ ಬಳಿಕ ಕಪ್ಪು ಚಹಾ ಕುಡಿದರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹದ ಶಕ್ತಿಯನ್ನು ವೃದ್ಧಿಸಿ ದಿನಪೂರ್ತಿ ನೀವು ಉಲ್ಲಾಸಿತವಾಗಿರುವಂತೆ ನೋಡಿಕೊಳ್ಳುತ್ತದೆ.

ವ್ಯಾಯಮದ ಬಳಿಕ ಕಪ್ಪು ಚಹಾ ಕುಡಿಯುವುದರಿಂದ ರಕ್ತನಾಳದಲ್ಲಿರುವ ನೈಟ್ರಿಕ್ ಆಕ್ಸೈಡ್ ಮಟ್ಟವು ಹೆಚ್ಚಾಗಿ ಸುಲಭವಾಗಿ ಭಾರ ಎತ್ತಲು ಸಾಧ್ಯವಾಗುವುದು. ಕಪ್ಪು ಚಹಾ ಕ್ಯಾಲರಿ ದಹಿಸುವ ಕಾರಣದಿಂದ ತೂಕ ಕಡಿಮೆ ಮಾಡಬಹುದು. ಉತ್ತಮ ಫಲಿತಾಂಶಕ್ಕಾಗಿ ಕಪ್ಪು ಗ್ರೀನ್ ಟೀ ಕುಡಿಯಿರಿ.

ವ್ಯಾಯಾಮದ ಬಳಿಕ ಸ್ನಾಯುಗಳ ನೋವನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಒಂದು ಕಪ್ ಶುಂಠಿ ಚಹಾ ಕುಡಿಯಬೇಕು. ಇದು ಮನಸ್ಸಿನ ಭಾವನೆಗಳನ್ನು ಉತ್ತಮಗೊಳಿಸಿ ಜೀರ್ಣಕ್ರಿಯೆಗೂ ಸಹಕಾರಿಯಾಗುವುದು. ಸ್ನಾಯುಗಳ ನೋವನ್ನು ಕಡಿಮೆ ಮಾಡಿಕೊಳ್ಳಲು ಶುಂಠಿ ಚಹಾವನ್ನು ಕುಡಿಯಿರಿ. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ವ್ಯಾಯಾಮದ ಬಳಿಕ ತಂಪಾಗಿರುವ ಸಿಹಿ ಇಲ್ಲದ ಹರ್ಬಲ್ ಚಹಾ ಕುಡಿದರೆ ಅದು ಮನಸ್ಥಿತಿಯನ್ನು ಸುಧಾರಿಸಿ ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಸಿಹಿಯಾಗಿರದ ಈ ತಂಪು ಚಹಾ ಕಡಿಮೆ ಕ್ಯಾಲರಿ ಹೊಂದಿದೆ ಮತ್ತು ಇದು ದೇಹದಲ್ಲಿ ನೀರಿನಾಂಶವನ್ನು ಕಾಪಾಡುತ್ತದೆ.

ಕಾರ್ಡಿಯೋ ವ್ಯಾಯಾಮವನ್ನು ಮಾಡುತ್ತಲಿದ್ದರೆ ವ್ಯಾಯಾಮದ ಬಳಿಕ ತಂಪಾದ ಹರ್ಬಲ್ ಚಹಾ ಕುಡಿಯಿರಿ. ಈ ಎಲ್ಲಾ ರೀತಿಯ ಚಹಾವನ್ನು ಕುಡಿದರೆ ನೀವು ಫಿಟ್ ಆಗಿ ಆರೋಗ್ಯದಿಂದ ಇರಬಹುದಾಗಿದೆ.

Comments are closed.