ಉಡುಪಿ: ಮರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಉಡುಪಿಯ ಕಾರ್ಕಳದ ಜೋಡುಕಟ್ಟೆ ಬಳಿ ಸಂಭವಿಸಿದ ಅಪಘಾತ ಇದಾಗಿದ್ದು ನಿಟ್ಟೆಪದವು ಗ್ರಾಮದ ಅರುಣ್ ನಾಯಕ್ (22), ರಕ್ಷಿತ್ (23) ಮೃತದುರ್ದೈವಿಗಳು.
ತಡರಾತ್ರಿ ಹೋಟೇಲೊಂದರಲ್ಲಿ ಊಟ ಮುಗಿಸಿ ಅರುಣ್ ನಾಯಕ್, ರಕ್ಷಿತ್ ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು ಬೆಳಿಗ್ಗೆ ಅಪಘಾತ ನಡೆದಿರುವುದು ತಿಳಿದುಬಂದಿದ್ದು ಇಬ್ಬರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.