ಬೆಂಗಳೂರು(ಜ. 02): ಹೊಟೇಲ್’ನ ಗ್ರಾಹಕರು ಸರ್ವಿಸ್ ಚಾರ್ಜ್ ಪಾವತಿಸುವುದು ಕಡ್ಡಾಯವಲ್ಲ ಎಂದು ಕೇಂದ್ರ ಸರಕಾರ ಸೂಚನೆ ನೀಡಿರುವ ಸುದ್ದಿ ಬಂದಿದೆ. ಹೊಟೇಲ್’ನ ನಿರ್ದಿಷ್ಟ ಸೇವೆ ಇಷ್ಟವಾದಲ್ಲಿ ಮಾತ್ರ ಅದಕ್ಕೆ ವಿಧಿಸುವ ಸರ್ವಿಸ್ ಚಾರ್ಜನ್ನು ಗ್ರಾಹಕರು ಪಾವತಿಸಬಹುದಾಗಿದೆ. ಆದರೆ, ಹೊಟೇಲ್’ನ ಬಿಲ್’ನ್ನು ಗಮನಿಸಿದರೆ ಸರ್ವಿಸ್ ಟ್ಯಾಕ್ಸ್ ಮತ್ತು ಸರ್ವಿಸ್ ಚಾರ್ಜ್ ಎರಡೂ ಒಳಗೊಂಡಿರುತ್ತದೆ. ಇದು ಕೆಲವರಿಗೆ ಗೊಂದಲ ಮೂಡಿಸಬಹುದು.
ಸರ್ವಿಸ್ ಟ್ಯಾಕ್ಸ್: ಹೆಸರೇ ಹೇಳುವಂತೆ ಇದು ಸರಕಾರ ವಿಧಿಸುವ ಒಂದು ತೆರಿಗೆಯಾಗಿದೆ. ಸರ್ವಿಸ್ ಟ್ಯಾಕ್ಸ್, ವ್ಯಾಲ್ಯೂ ಆ್ಯಡೆಡ್ ಟ್ಯಾಕ್ಸ್(ವ್ಯಾಟ್) ಮೊದಲಾದವನ್ನು ಸರಕಾರವೇ ಹೇರುತ್ತದೆ. ಇವು ಸಾಮಾನ್ಯವಾಗಿ ಸರಕಾರ ನಿಗದಿಪಡಿಸಿರುವ ಪ್ರಕಾರವೇ ಹೊಟೇಲ್’ನವರು ತೆರಿಗೆಯನ್ನು ಹೇರಬೇಕಾಗುತ್ತದೆ.
ಸರ್ವಿಸ್ ಚಾರ್ಜ್: ಇದು ಹೊಟೇಲ್’ನವರು ತಮ್ಮ ಇಚ್ಛಾನುಸಾರ ಗ್ರಾಹಕರಿಗೆ ವಿಧಿಸುವ ಸೇವಾ ಶುಲ್ಕವಾಗಿದೆ. ಸಾಮಾನ್ಯವಾಗಿ ಇದರ ಪ್ರಮಾಣವು ಬಿಲ್ ಮೊತ್ತಕ್ಕೆ ಶೇ.5ರಿಂದ 20ರಷ್ಟಿರುತ್ತದೆ. ಕೆಲ ಹೊಟೇಲ್’ಗಳು ಇನ್ನೂ ಹೆಚ್ಚು ಸರ್ವಿಸ್ ಚಾರ್ಜ್ ವಿಧಿಸುವುದುಂಟು.
ಕರ್ನಾಟಕ
Comments are closed.