ಮನೋರಂಜನೆ

ದುನಿಯಾ-2 ಫಸ್ಟ್‌ ಲುಕ್‌

Pinterest LinkedIn Tumblr

duniya-2
‘ಧೂಮಪಾನದಿಂದ ಕ್ಯಾನ್ಸರ್‌ ಸಂಭವಿಸುತ್ತದೆ, ಮದ್ಯಪಾನದಿಂದ ಸಾವು ಸಂಭವಿಸುತ್ತದೆ, ಇಸ್ಪಿಟ್ಟು–ರೇಸು–ಡೈಸು–ಬೆಟ್ಟಿಂಗು, ಇದನ್ನೆಲ್ಲ ಆಡೋದ್ರಿಂದ ಜೀವನ ಹಾಳಾಗುತ್ತೆ ಅಂತ ಗೊತ್ತಿದ್ರೂ ಆಡದನ್ನ ಮಾತ್ರ ನಿಲ್ಲಿಸೋಲ್ಲ….’

ಇದು ದುನಿಯಾ 2 ಸಿನಿಮಾದ ಫಸ್ಟ್‌ ಲುಕ್‌. ಇಲ್ಲಿ ಲೂಸ್‌ ಮಾದಾ/ಡ್ಯಾನ್ಸಿಂಗ್‌ ಸ್ಟಾರ್‌ ಯೋಗೇಶ್‌ ಮೈಗಂಟಿದ ಚರ್ಮದಂತೆ ಅಂಟಿಕೊಳ್ಳುವ ಚಟಗಳ ಬಗ್ಗೆ ಮಾತನಾಡುತ್ತಾ ಹೋಗುತ್ತಾರೆ.

10 ವರ್ಷಗಳ ಹಿಂದೆ ಸೂರಿ ನಿರ್ದೇಶನದ ‘ದುನಿಯಾ’ ಚಿತ್ರದ ಮೂಲಕ ಯೋಗಿ ಚಿತ್ರರಂಗ ಪ್ರವೇಶ ಪಡೆದರು. ಈಗ ಅದೇ ಯೋಗಿ ದುನಿಯಾ 2 ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ನಟ ಯೋಗಿ ಅವರ ತಂದೆ ಟಿ.ಪಿ.ಸಿದ್ದರಾಜು ಸ್ಯಾಮಿ ಅಸೋಸಿಯೇಟ್ಸ್‌ ಬ್ಯಾನರ್‌ ಅಡಿಯಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ.

ಹರಿ ನಿರ್ದೇಶನವಿರುವ ದುನಿಯಾ 2 ಸಿನಿಮಾದಲ್ಲಿ ಹಿತಾ ಚಂದ್ರಶೇಖರ್‌ ನಾಯಕಿಯಾಗಿ ಅಭಿನಯಿಸಿದ್ದಾರೆ. ಫೆಬ್ರವರಿಯಲ್ಲಿ ಸಿನಿಮಾ ತೆರೆಕಾಣಲಿದೆ.

Comments are closed.