ಅಂತರಾಷ್ಟ್ರೀಯ

ಬಾಗ್ದಾದ್‌: ಬಾಂಬ್‌ ದಾಳಿಗೆ 32 ಸಾವು; ಹೊಣೆಹೊತ್ತ ಐಎಸ್‌

Pinterest LinkedIn Tumblr

bhagdadh-final
ಬಾಗ್ದಾದ್‌: ಬಾಗ್ದಾದ್‌ನ ನೆರೆಯ ನಗರ ಸದ್ರಾದಲ್ಲಿ ಸೋಮವಾರ ಆತ್ಮಹತ್ಯೆ ಕಾರ್‌ ಬಾಂಬ್‌ ದಾಳಿ ನಡೆದಿದ್ದು, ಘಟನೆಯಲ್ಲಿ 32 ಮಂದಿ ಸಾವಿಗೀಡಾಗಿದ್ದಾರೆ. 61 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಸ್ಲಾಮಿಕ್‌ ಸ್ಟೇಟ್‌ ಗ್ರೂಪ್‌(ಐಎಸ್‌) ದಾಳಿಯ ಹೊಣೆ ಹೊತ್ತಿದ್ದು, ದಾಳಿಯು ‘ಹುತಾತ್ಮರ ಕಾರ್ಯಾಚರಣೆ’ ಎಂದು ಘೋಷಿಸಿಕೊಂಡಿದ್ದು, ಘಟನೆಯಲ್ಲಿ ಒಟ್ಟು 40 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿದೆ.

ಮೃತಪಟ್ಟವಲ್ಲಿ ಬಹುತೇಕ ಮಂದಿ ದಿನಗೂಲಿ ಕಾರ್ಮಿಕರು. ನಗರದ ಹೊರವಲಯದಲ್ಲಿ ದಿನದ ಕೂಲಿಗಾಗಿ ಕಾಯುತ್ತಿದ್ದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನಗರದಲ್ಲಿ ನಡೆದ ಎರಡನೇ ಆತ್ಮಹತ್ಯೆ ದಾಳಿ ಇದಾಗಿದೆ. ಶನಿವಾರ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಬಾಂಬ್‌ ದಾಳಿಯಲ್ಲಿ 27 ಮಂದಿ ಸಾವಿಗೀಡಾಗಿದ್ದರು.

Comments are closed.