ಕರ್ನಾಟಕ

ಕೈಗಾರಿಕಾ ಇಲಾಖೆ ಅಧಿಕಾರಿ ಬಳಿ 96 ಎಕರೆ ಕೃಷಿ ಭೂಮಿ!

Pinterest LinkedIn Tumblr

acb-3
ಬೆಂಗಳೂರು: ಮಧ್ಯಮವರ್ಗದ ಸರ್ಕಾರಿ ಅಧಿಕಾರಿಯೊಬ್ಬನ ಬಳಿ 96 ಎಕರೆಯಷ್ಟು ಕೃಷಿ ಭೂಮಿ ಹೊಂದಿರುವುದು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ವೇಳೆ ಬಹಿರಂಗಗೊಂಡಿದೆ.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಚೇರಿಯಲ್ಲಿ ವಿಸ್ತರಣಾಧಿಕಾರಿ ಜಿ. ನಾಗರಾಜು ಮನೆಯ ಮೇಲೆ ಎಸಿಬಿ ದಾಳಿ ನಡೆಸಿದ ವೇಳೆ ತುಮಕೂರು ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಒಟ್ಟು 96. ಎಕರೆಯಷ್ಟು ಕೃಷಿ ಭೂಮಿ, ಬೆಂಗಳೂರಿನ ಇಸ್ತೂರಿನ ಬಳಿ ಮನೆ ಜತೆಗೆ ಕುಮಾರಕೃಪಾ ಪಶ್ಚಿಮದಲ್ಲಿ ಖಾಸಗಿ ಕಚೇರಿ ಹೊಂದಿರುವುದು ಬಯಲಾಗಿದೆ.
ಕಳೆದ 25 ವರ್ಷಗಳಿಂದ ವಿಸ್ತರಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ನಾಗರಾಜು ತಿಂಗಳಿಗೆ ಪಡೆಯುತ್ತಿದ್ದ 40,000 ರೂ ವೇತನದಲ್ಲಿ 96 ಎಕರೆಯಷ್ಟು ಕೃಷಿ ಭೂಮಿ ಬೆಂಗಳೂರಿನಲ್ಲಿ ಮನೆ, ತುಮಕೂರಿನ ಶಿರಾ ಹಾಗೂ ಚಿತ್ರದುರ್ಗದಲ್ಲಿ ಫಾರಂ ಹೌಸ್ ನ್ನು ಖರೀದಿಸಿದ್ದಾರೆ.
ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಭೂದಾಖಲೆಗಳ ಉಪನಿರ್ದೇಶಕ ಇ. ಪ್ರಕಾಶ್‌ ಅವರ ನಿವಾಸದ ಮೇಲೂ ಎಸಿಬಿ ದಾಳಿ ನಡೆಸಿದ್ದು ಬೆಂಗಳೂರು ಸುತ್ತಮುತ್ತ 3 ಎಕರೆ ಕೃಷಿ ಭೂಮಿ, ಮನೆ ಮತ್ತು ಮೂರು ನಿವೇಶನ ಹೊಂದಿರುವುದನ್ನು ಪತ್ತೆ ಮಾಡಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ ಪ್ರಕಾಶ್‌ಗೆ ಸೇರಿದ ನಾಲ್ಕು ಸುರಕ್ಷಿತ ಲಾಕರ್‌ ತಪಾಸಣೆ ನಡೆಸಿದ್ದಾರೆ.

Comments are closed.