ರಾಷ್ಟ್ರೀಯ

ದಾಖಲೆ ಇಲ್ಲದ.4200 ಕೋಟಿ ಪತ್ತೆ

Pinterest LinkedIn Tumblr

note22
ನವದೆಹಲಿ,ಡಿ.30- ನೋಟು ರದ್ದತಿಯನ್ನು ದುರ್ಬಳಕೆ ಮಾಡಿಕೊಂಡು ಕಪ್ಪು ಹಣವನ್ನು ಬಿಳಿಯಾಗಿಸಿಕೊಂಡವರ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 5000 ನೋಟಿಸ್‍ಗಳನ್ನು ಜಾರಿ ಮಾಡಿದ್ದು, ದಾಖಲೆ ರಹಿತ 4200 ಕೋಟಿ ರೂ.ಗಳನ್ನು ಪತ್ತೆ ಹಚ್ಚಿದ್ದಾರೆ.
ಕಳೆದ ನ.8ರಿಂದ ದೇಶದಾದ್ಯಂತ ಸಾವಿರಕ್ಕೂ ಹೆಚ್ಚು ಶೋಧ ಕಾರ್ಯಗಳನ್ನು ನಡೆಸಲಾಗಿದೆ. ಡಿ.22 ಮತ್ತು 28ರ ನಡುವೆ 200 ದಾಳಿಗಳನ್ನು ನಡೆಸಲಾಗಿದೆ ಎಂದು ಇಲಾಖೆ ದಾಖಲೆ ಪ್ರದರ್ಶಿಸಿದೆ.
ಶೋಧ ಕಾರ್ಯಾಚರಣೆ ವೇಳೆ ಲೆಕ್ಕದ ಪುಸ್ತಕಗಳು, ನಗದು ಮತ್ತಿತರ ಆಸ್ತಿಪತ್ರಗಳು ದೊರಕಿದ್ದು, ಎಲ್ಲವನ್ನೂ ವಶ ಪಡಿಸಿಕೊಳ್ಳಲಾಗಿದೆ.
ದಾಳಿ ಸಂದರ್ಭದಲ್ಲಿ ಕೋಟಿಗಟ್ಟಲೇ ಹೊಸ ನೋಟುಗಳ ಕಂತೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅನ್ಯರ ಬ್ಯಾಂಕ್ ಖಾತೆಗಳನ್ನು ದುರುಪಯೋಗಪಡಿಸಿಕೊಂಡು ಕಪ್ಪುಹಣವನ್ನು ಬಿಳಿಯಾಗಿಸಿಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಪ್ಪುಹಣ ನಿಯಂತ್ರಣಕ್ಕೆ ಪ್ರಧಾನಿ ಮೋದಿ ನ.8ರಂದು ನೋಟು ರದ್ದತಿ ಜಾರಿ ಮಾಡಿದರು. ಅಂದಿನಿಂದ ಕಾಳಧನಿಕರ ವಿರುದ್ಧ ಕಾರ್ಯಾಚರಣೆ ಚುರುಕುಗೊಂಡಿದೆ. ಅಧಿಕಾರಿಗಳ, ಉದ್ಯಮಿಗಳ ಬಳಿ ಕೋಟಿಗಟ್ಟಲೇ ಕಪ್ಪುಹಣ, ಬೇನಾಮಿ ಆಸ್ತಿ, ಚಿನ್ನದ ಮೇಲಿನ ಹೂಡಿಕೆ ಮತ್ತು ರಿಯಲ್ ಎಸ್ಟೇಟ್ ದಂಧೆಯಲ್ಲಿ ಅಕ್ರಮ ಹೂಡಿಕೆಗಳು ಕಂಡುಬಂದಿವೆ.
ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ನಾನಾ ಪ್ರಕರಣಗಳ ತನಿಖೆಯನ್ನು ಮುಂದುವರೆಸಿವೆ.

Comments are closed.