ಕರ್ನಾಟಕ

ನೋಟು ನಿಷೇಧ: ಗಾರ್ಮೆಂಟ್ಸ್, ಬೇಕರಿಗಳಿಗೆ ಹೊಡೆತ

Pinterest LinkedIn Tumblr

pvec230416h garment-1ಬೆಂಗಳೂರು: ಕೇಂದ್ರ ಸರ್ಕಾರದ ನೋಟುಗಳ ಅಪಮೌಲ್ಯ ಸಣ್ಣ ಮತ್ತು ಮಧ್ಯಮ ವರ್ಗದ ಜನರಿಗೆ ತೀವ್ರ ಹೊಡೆತ ಬಿದ್ದಿದೆ. ದಿನಗೂಲಿ ಅಥವಾ ವಾರಗೂಲಿ ನೌಕರರು ಹಣಕ್ಕಾಗಿ ಪರದಾಡುವ ಪರಿಸ್ಥಿತಿ ಬಂದಿದೆ. ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ನೌಕರರು, ಬೇಕರಿಗಳಲ್ಲಿ ಕೆಲಸ ಮಾಡುವವರ ಮೇಲೆ ಇದು ತೀವ್ರ ಹೊಡೆತ ಬಿದ್ದಿದೆ.ಸರಿಯಾದ ಸಮಯಕ್ಕೆ ವೇತನ ಸಿಗದಿರುವುದು, ಚಿಲ್ಲರೆ ಸಮಸ್ಯೆ, ಅಕೌಂಟ್ ನಲ್ಲಿ ಹಣವಿದ್ದರೂ ತೆಗೆಯಲು ಸಾಧ್ಯವಾಗದಿರುವುದು ಸಂಕಷ್ಟಕ್ಕೆ ಸಿಲುಕಿಸಿದೆ.
ಮೇರಿ ನಿರ್ಮಲಾ ಎಂಬುವವರು ಕಳೆದ ಮೂರು ವಾರಗಳಿಂದ ಸ್ನೇಹಿತರು, ಸಹೋದ್ಯೋಗಿಗಳು, ಸಂಬಂಧಿಕರು, ಅಕ್ಕಪಕ್ಕದ ಮನೆಯವರಿಂದ ಸಾಲ ಮಾಡಿ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಮೇರಿ ನಿರ್ಮಲಾ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಅಗರಬತ್ತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಡಿಸೆಂಬರ್ ತಿಂಗಳು ಆರಂಭವಾದರೂ ಕೂಡ ಕಳೆದ ತಿಂಗಳ ವೇತನ ಸಿಕ್ಕಿಲ್ಲ. ಡಿಸೆಂಬರ್ ತಿಂಗಳ ಇದರ ಬಿಲ್ ಗಳು ಬಂದು ಬಿದ್ದಿವೆ.
ಮೂರು ಮಕ್ಕಳ ತಾಯಿಯಾಗಿರುವ ಮೇರಿ ನಿರ್ಮಲಾ ಕುಟುಂಬಕ್ಕೆ ಅವರೊಬ್ಬರೇ ಆಧಾರ. ಆಕೆಯ ಪತಿ ಅನಾರೋಗ್ಯಪೀಡಿತ. ಇಂದು ನಾನು ಕೆಲಸಕ್ಕೆ ಬರುವ ಮುನ್ನ 200 ರೂಪಾಯಿ ನೆರೆ ಮನೆಯವರ ಹತ್ತಿರ ಸಾಲ ಮಾಡಿ ತೆಗೆದುಕೊಂಡು ಬಂದೆ. ನೋಟುಗಳ ನಿಷೇಧದ ಸಂಕಷ್ಟ ಪರಿಸ್ಥಿತಿ ಸಹಜತೆಗೆ ಬರುವವರೆಗೆ ಹಣ ಹೊಂದಿಸುವ ಬಗ್ಗೆ ಅವರಿಗೆ ಚಿಂತೆಯಿದೆ.
ಕಳೆದ ತಿಂಗಳಿನಿಂದ ಮೇರಿಯಂತೆ ನೂರಾರು ಸಣ್ಣಪುಟ್ಟ ಕೆಲಸಗಾರರು ಬ್ಯಾಂಕ್, ಎಟಿಎಂ ಮುಂದೆ ಗಂಟೆಗಟ್ಟಲೆ ನಿಂತು ಹಣ ಸಿಗದೆ ವಾಪಾಸ್ಸಾಗುತ್ತಿದ್ದಾರೆ. ಇತ್ತ ಫ್ಯಾಕ್ಟರಿಯಲ್ಲಿ ಅವರಿಗೆ ದಿನದ ಸಂಬಳವೂ ಕಟ್ ಆಗುತ್ತಿದೆ.
ಚಾಮರಾಜಪೇಟೆ ಮತ್ತು ಪೀಣ್ಯದ ಹಲವು ಸ್ಥಳಗಳಿಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಭೇಟಿ ನೀಡಿದಾಗ ಪರಿಸ್ಥಿತಿ ಎಲ್ಲಾ ಕಡೆ ಒಂದೇ ಆಗಿತ್ತು. ಗಾರ್ಮೆಂಟ್ಸ್, ಅಗರಬತ್ತಿ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ನೋಟುಗಳ ಅಪಮೌಲ್ಯದಿಂದ ಬಹಳ ತೊಂದರೆ ಅನುಭವಿಸುತ್ತಿದ್ದಾರೆ.
ನೋಟುಗಳ ನಿಷೇಧ ಫ್ಯಾಕ್ಟರಿ, ಬೇಕರಿಗಳ ಮಾಲಿಕರಿಗೂ ಕೂಡ ನೌಕರರಿಗೆ ವೇತನ ನೀಡಲು ತೊಂದರೆಯಾಗುತ್ತಿದೆ.

Comments are closed.