ಕರ್ನಾಟಕ

ಕಲಬುರ್ಗಿಯ ಕೋಟೆಯಲ್ಲಿ ವಿಶ್ವದ ಅತಿ ಉದ್ದದ ಫಿರಂಗಿ?

Pinterest LinkedIn Tumblr

cannonಕಲಬುರ್ಗಿಯ ಕೋಟೆಯಲ್ಲಿ ಸಂಶೋಧಕರು ಅತಿ ಉದ್ದದ ಫಿರಂಗಿಯನ್ನು ಪತ್ತೆ ಮಾಡಿದ್ದಾರೆ. ವಿಶ್ವದಲ್ಲಿಯೇ ಇದು ಅತಿ ಉದ್ದದ ಫಿರಂಗಿ ಎನ್ನಲಾಗಿದೆ.
ಸಂಶೋಧಕರಾದ ಮೊಹಮ್ಮದ್ ಅಯಾಜುದ್ದೀನ್ ಪಟೇಲ್, ರೆಹಮಾನ್ ಪಟೇಲ್ ಮತ್ತು ಮೊಹಮ್ಮದ್ ಇಸ್ಲಾಯಿಲ್ ಅವರು ಕಲಬುರ್ಗಿಯ ಕೋಟೆಯಲ್ಲಿರುವ ಫಿರಂಗಿ ಕುರಿತು ಸಂಶೋಧನೆ ಕೈಗೊಂಡಿದ್ದರು. ಸಂಶೋಧನೆ ವೇಳೆ ಬಾರಾ ಘಜಿ ಟಾಪ್ 29 ಅಡಿ ಉದ್ದದ ಫಿರಂಗಿಯಾಗಿದ್ದು ಇದನ್ನು ಬಹಮನಿ ಸಾಮ್ರಾಟರು ಬಳಸುತ್ತಿದ್ದು ಇದು 14ನೇ ಶತಮಾನದ್ದು ಎಂಬುದನ್ನು ಗುರುತಿಸಿದ್ದಾರೆ.
ವಿಶ್ವದ 10 ಉದ್ದದ ಫಿರಂಗಿಗಳ ಪಟ್ಟಿ
ಟಿಸಾರ್ ಫಿರಂಗಿ (17.5 ಅಡಿ), 15ನೇ ಶತಮಾನ ರಷ್ಯಾ, ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬುಕ್ ನಲ್ಲಿ ಸ್ಥಾನ
ಪುಮ್ಹಾರ್ಟ್ ವೊನ್ ಸ್ಟೆಯ್ರ್ (259 ಸೆಂಟಿ ಮೀಟರ್) 15ನೇ ಶತಮಾನ, ಆಸ್ಟ್ರೀಯಾ
ದಿ ಬಸಲಿಕ್ ಒಟ್ಟೊಮಾನ್ (732 ಸೆಂಟಿ ಮೀಟರ್) ಟರ್ಕಿಶ್
ಫೌಲೇ ಮೇಟೆ (181 ಸೆಂಟಿ ಮೀಟರ್) 15ನೇ ಶತಮಾನ, ಜರ್ಮನಿ
ಮಲಿಕ್-ಇ-ಮೈದಾನ್ (14.6 ಅಡಿ) 16ನೇ ಶತಮಾನ, ಬಿಜಾಪುರ್, ಭಾರತ
ದುಲೇ ಗ್ರೀಟ್ (345 ಸೆಂಟಿ ಮೀಟರ್) 14ನೇ ಶತಮಾನ, ಬೆಲ್ಜಿಯಂ, ಯೂರೋಪ್
ದರ್ದನೆಲ್ಲೆಸ್ ಗನ್ (518 ಸೆಂಟಿ ಮೀಟರ್) 15ನೇ ಶತಮಾನ, ಟರ್ಕಿಶ್
ಮೊನ್ಸ್ ಮೆಗ್ (4.6 ಮೀಟರ್) 15ನೇ ಶತಮಾನ, ಸ್ಕಾಟೀಶ್, ಸ್ಕಾಟ್ಲಾಂಡ್
ಫೌಲೇ ಗ್ರೇಟ್ (250 ಸೆಂಟಿ ಮೀಟರ್) 15ನೇ ಶತಮಾನ
ಜೈವಾನ (20.2 ಅಡಿ) 18ನೇ ಶತಮಾನ, ಜೈಪುರ, ಭಾರತ

Comments are closed.