ಕ್ರೀಡೆ

ಪತ್ನಿ ಜೊತೆ ಕ್ರಿಕೆಟಿಗ ಯುವರಾಜ್ ಸಿಂಗ್ ಡ್ಯಾನ್ಸ್

Pinterest LinkedIn Tumblr

yuvraj-singh-hazel-keech-first-dance-finalಗೋವಾ: ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಗುರುಬಸಂತ್ ಕೌರ್‍ವರ ಮದುವೆ ಕಾರ್ಯಕ್ರಮದಲ್ಲಿ ನವಜೋಡಿ ಜೊತೆ ವಿರಾಟ್ ಕೊಹ್ಲಿ ಹೆಜ್ಜೆ ಹಾಕಿ ಮದುವೆ ಆಗಮಿಸಿದ ಅತಿಥಿಗಳನ್ನು ರಂಜಿಸಿದರು. ಯುವಿಯ ಮದುವೆ ಕಾರ್ಯಕ್ರಮದಲ್ಲಿ ಜೋಡಿ ಹಕ್ಕಿಗಳಾದ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಜೋಡಿಯಾಗಿ ಆಗಮಿಸಿ ನವಜೋಡಿಗೆ ಶುಭವನ್ನು ಕೋರಿದರು.

ಯುವರಾಜ್ ಸಿಂಗ್ ನವೆಂಬರ್ 30ರಂದು ಸಿಖ್ ಸಂಪ್ರದಾಯದಂತೆ ಪಂಜಾಬಿನ ಫತೇಗರ್‍ನಲ್ಲಿ ಮಾಡೆಲ್ ಹೇಜಲ್ ಕೀಚ್‍ರನ್ನು ಮದುವೆಯಾಗಿದ್ದರು. ಶುಕ್ರವಾರ ಗೋವಾದಲ್ಲಿ ಮತ್ತೊಮ್ಮೆ ಹಿಂದೂ ಮತ್ತು ಕ್ಯಾಥೋಲಿಕ್ ಸಂಪ್ರದಾಯದಂತೆ ಮದುವೆಯ ಕಾರ್ಯಕ್ರಮಗಳು ನಡೆದವು.

ಯಾರಿದು ಗುರುಬಸಂತ್ ಕೌರ್: ನವೆಂಬರ್ 30ರಂದು ಸಿಖ್ ಸಂಪ್ರದಾಯದಂತೆ ಮದುವೆಯಾದ ಹೇಜೆಲ್ ಕೀಚ್, ಪಂಜಾಬಿ ಹುಡುಗ ಯುವರಾಜ್‍ರನ್ನು ಮದುವೆಯಾಗಿದ್ದರು. ಮದುವೆ ನಂತರ ಸಿಖ್ ಧರ್ಮಗುರು ಗುರರುದ್ವಾರದ ಬಾಬಾ ರಾಮ್ ಸಿಂಗ್‍ರ ಸಲಹೆಯಂತೆ ಹಿಝೇಲ್ ತಮ್ಮ ಹೆಸರನ್ನು ಗುರುಬಸಂತ್ ಕೌರ್ ಎಂದು ಬದಲಿಸಿಕೊಂಡಿದ್ದಾರೆ.

ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತನ್ನ ಪ್ರೇಯಸಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾರೊಂದಿಗೆ ಆಗಮಿಸಿ ಮದುವೆಯ ಕಾರ್ಯಕ್ರಗಳಲ್ಲಿ ಭಾಗವಹಿಸಿದ್ದರು. ನವೆಂಬರ್ 29ರಂದು ನಡೆದ ಸಂಗೀತ್ ಕಾರ್ಯಕ್ರಮಕ್ಕೆ ಕೊಹ್ಲಿ ಕ್ರಿಕೆಟ್ ತಂಡದ ಸದಸ್ಯರೊಂದಿಗೆ ಹಾಜರಾಗಿದ್ದರು.

ಕೊಹ್ಲಿ ಮತ್ತು ಅನುಷ್ಕಾ ಡ್ಯಾನ್ಸ್: ಕ್ರಿಕೆಟಿಗ ಯುವಿ ಮದುವೆ ಮೋಜು ಮಸ್ತಿಯಿಂದ ಕೂಡಿತ್ತು. ಈ ವೇಳೆಯಲ್ಲಿ ನಟಿ ಅನುಷ್ಕಾ ಶರ್ಮಾ ನೆರೆದಿರುವ ಜನರೊಂದಿಗೆ ಹಿಂದಿಯ ಸೆನೋರಿಟಾ ಹಾಡಿಗೆ ಹೆಜ್ಜೆ ಹಾಕಿದರು. ಇತ್ತ ನಾನೇನು ಕಡಿಮೆಯಿಲ್ಲ ಎಂಬಂತೆ ಕೊಹ್ಲಿ ತನ್ನ ಕ್ರಿಕೆಟ್ ಗೆಳೆಯರೊಂದಿಗೆ ಡ್ಯಾನ್ಸ್ ಮಾಡಿದರು.

ಡ್ಯಾನ್ಸ್ ಕಾರ್ಯಕ್ರಮ ನಡೆಯುವ ವೇಳೆಯಲ್ಲಿ ನವಜೋಡಿ ಯುವರಾಜ್ ಮತ್ತು ಹೀಜೆಲ್ ಕೂಡ ಒಬ್ಬರ ಕೈಯನ್ನು ಒಬ್ಬರು ಹಿಡಿದು ಹೆಜ್ಜೆ ಹಾಕಿದರು. ಇತ್ತ ಕೊಹ್ಲಿ ನವಜೋಡಿ ಜೊತೆ ಸಖತ್ ಸ್ಟೆಪ್ಸ್ ಹಾಕಿ ಖುಷಿ ಪಟ್ಟರು. ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಗೋವಾದಲ್ಲಿ ನಡೆದ ಮದುವೆಯ ಕಾರ್ಯಕ್ರಮಕ್ಕೆ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಜೊತೆ ಆಗಮಿಸಿ ನವಜೋಡಿಗೆ ಶುಭ ಕೋರಿದರು.

Comments are closed.