ನ್ಯೂಯಾರ್ಕ್: ನಿಮ್ಮ ಸ್ಮಾರ್ಟ್ ಫೋನ್ ಎಷ್ಟು ಹಳೆಯದ್ದು ಎಂದು ನೋಡಿಕೊಳ್ಳುವ ಸಮಯ ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ ಜನಪ್ರಿಯ ಮೆಸೇಜಿಂಗ್ ತಂತ್ರಾಂಶ ವಾಟ್ಸ್ ಆಪ್ ೨೦೧೬ ರ ಅಂತ್ಯಕ್ಕೆ ಅಪ್ಡೇಟ್ ಆಗಿರದ ಲಕ್ಷಾಂತರ ಫೋನ್ ಗಳಲ್ಲಿ ಸ್ಥಗಿತಗೊಳ್ಳಲಿದೆಯಂತೆ.
ಒಂದು ಬಿಲಿಯನ್ ಸರಾಸರಿ ತಿಂಗಳ ಬಳಕೆದಾರರನ್ನು ಹೊಂದಿರುವ ವಾಟ್ಸ್ ಆಪ್, ಹಳೆಯ ಫೋನುಗಳಿಂದ ಹೊರಬೀಳಲಿದೆ ಎಂದು ದಿ ಮಿರರ್ ವರದಿ ಮಾಡಿದೆ.
“ನಮ್ಮ ಯಶಸ್ಸಿನ ಕಥೆಯಲ್ಲಿ ಈ ಹಳೆಯ ಫೋನುಗಳು ಪ್ರಮುಖವಾಗಿದ್ದರು, ನಾವು ಭವಿಷ್ಯದಲ್ಲಿ ವಿಸ್ತರಿಸಬೇಕೆಂದಿರುವ ಆಪ್ ಲಕ್ಷಣಗಳಿಗೆ ಅವುಗಳು ಬೆಂಬಲಿಸುವುದಿಲ್ಲ” ಎಂದು ವಾಟ್ಸ್ ಆಪ್ ವಕ್ತಾರ ಹೇಳಿರುವುದಾಗಿ ವರದಿಯಾಗಿದೆ.
“ಮುಂದಿನ ಏಳು ವರ್ಷಗಳ ಗುರಿ ನಮ್ಮದಾಗಿದ್ದು, ವಿಸ್ತಾರವಾದ ಸಂಖ್ಯೆಯಲ್ಲಿ ಜನ ಬಳಸುವ ಮೊಬೈಲ್ ತಂತ್ರಾಂಶದ ಮೇಲೆ ನಾವು ಗಮನ ಹರಿಸಲಿದ್ದೇವೆ” ಎಂದು ವಕ್ತಾರ ಹೇಳಿದ್ದಾರೆ.
೨೦೧೭ ರಿಂದ ನಮ್ಮ ಹಳೆಯ ಸೇವೆ ಸ್ಥಗಿತಗೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ.
“ಐಫೋನ್ ಬಳಕೆದಾರರಿಗೆ ಐಫೋನ್ ೩ ಜಿಸ್ ನಲ್ಲಿ ವಾಟ್ಸ್ ಆಪ್ ಸೇವೆ ಸ್ಥಗಿತಗೊಳ್ಳಲಿದ್ದು, ಐ ಒ ಎಸ್ ೬ ರ ಮೇಲೆ ಓಡುವ ಫೋನ್ ಗಳಲ್ಲೂ ಸೇವೆ ನಿಂತುಹೋಗಲಿದೆ” ಎಂದು ಮ್ಯಾಂಚೆಸ್ಟರ್ ಇವಿನಿಂಗ್ ನ್ಯೂಸ್ ವರದಿ ಮಾಡಿದೆ.
ಅಪ್ಡೇಟ್ ಆಗದ ಮೊದಲ, ಎರಡನೇ, ಮೂರನೇ ಮತ್ತು ನಾಲ್ಕನೇ ಪೀಳಿಗೆಯ ಐಪಾಡ್ ಗಳಲ್ಲೂ ಸೇವೆ ನಿಲ್ಲಲಿದೆ. ಬಳಕೆದಾರರು ಐ ಒ ಎಸ್ ೯.೩ ನಂತರಕ್ಕೆ ಅಪ್ಡೇಟ್ ಮಾಡಿಕೊಳ್ಳಬೇಕಿದೆ.
ಆಂಡ್ರಾಯ್ಡ್ ೨.೧ ಅಥವಾ ೨.೨ ಮೇಲೆ ನಡೆಯುತ್ತಿರುವ ಫೋನ್ ಗಳು ಮತ್ತು ಟ್ಯಾಬ್ಲೆಟ್ ಗಳಲ್ಲೂ ಈ ವರ್ಷದ ಅಂತ್ಯಕ್ಕೆ ವಾಟ್ಸ್ ಆಪ್ ಸೇವೆ ಸ್ಥಗಿತಗೊಳ್ಳಲಿದೆ.