ಕರ್ನಾಟಕ

ಮೆಣಸಿನಕಾಯಿ ಹಂಚಿ ಪ್ರತಿಭಟಿಸಿದ ವಾಟಾಳ್ ನಾಗರಾಜ್

Pinterest LinkedIn Tumblr

vatal-5ಬೆಂಗಳೂರು: ನೋಟ್ ಬ್ಯಾನ್ ವಿರೋಧಿಸಿ ಇಂದು ವಿಪಕ್ಷಗಳು ಕರೆ ನೀಡಿರುವ ಆಕ್ರೋಶ್ ದಿವಸ್ ಬೆಂಬಲಿಸಿ ವಾಟಾಳ್ ನಾಗರಾಜ್ ಮೆಣಸಿನಕಾಯಿ ಹಂಚುವ ಮೂಲಕ ಪ್ರತಿಭಟನೆ ನಡೆಸಿದ್ರು.
ಮೆಜೆಸ್ಟಿಕ್‍ನಲ್ಲಿ ತಳ್ಳುಗಾಡಿಯ ಮೇಲೆ ಒಣಮೆಣಸಿನ ಕಾಯಿ ಇಟ್ಟು ಪ್ರದರ್ಶಿಸಿದ್ರು. ನಂತರ ಜನರಿಗೆ ಮೆಣಸಿನಕಾಯಿ ಹಂಚಿ ಆಕ್ರೋಶ್ ದಿವಸ್‍ಗೆ ಬೆಂಬಲ ನೀಡಿದ್ರು.

ಇದೇ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಕೇಂದ್ರ ಸರ್ಕಾರ 1000, 500 ರೂ. ರದ್ದು ಮಾಡಿರುವುದಕ್ಕೆ ನಮ್ಮ ವಿರೋಧವಿಲ್ಲ, ಸಂತೋಷವೇ. ಆದ್ರೆ ವ್ಯವಸ್ಥೆ ಸರಿಯಿಲ್ಲ. ಇದರಿಂದ ಜನಸಾಮಾನ್ಯರು ತೊಂದರೆಪಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ರು.

ಜನಸಾಮಾನ್ಯರು ಹಣಬದಲಾವಣೆಗಾಗಿ ತಮ್ಮೆಲ್ಲಾ ಕೆಲಸ ಬಿಟ್ಟು ಊಟ, ತಿಂಡಿ, ನೀರು ಇಲ್ಲದೆ ಬ್ಯಾಂಕ್‍ಗಳ ಮುಂದೆ ನಿಂತು ನೋವನುಭವಿಸಿದ್ದಾರೆ. ಇದು ನರಕವಾಗಿದ್ದು, ಮೆಣಸಿನಕಾಯಿಯ ತಿಂದರೆ ಎಷ್ಟು ಖಾರವೋ ಅದಕ್ಕಿಂತಲೂ ತೀವ್ರ ಖಾರ ಎಂಬ ಕಾರಣಕ್ಕೆ ಮೆಣಸಿನಕಾಯಿ ಪ್ರದರ್ಶನ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದ್ರು.

Comments are closed.