ಕರ್ನಾಟಕ

ಎಟಿಎಂಗೆ ತುಂಬುವ ಹಣ ದೋಚಿದ್ದ ಚಾಲಕನ ಪತ್ನಿ ಬಂಧನ

Pinterest LinkedIn Tumblr

banasavadiಬೆಂಗಳೂರು: ಎಟಿಎಂಗಳಿಗೆ ತುಂಬಲು ವಿವಿಧ ಬ್ಯಾಂಕ್‌ಗಳಿಂದ ಸಂಗ್ರಹಿಸಿದ್ದ ಹಣ ದೋಚಿ ಪರಾರಿಯಾಗಿದ್ದ ಡೋಮಿನಿಕ್‌ ರಾಯ್‌ ಪತ್ನಿಯನ್ನು ಬಾಣಸವಾಡಿ ಪೋಲಿಸರು ಸೋಮವಾರ ಬಂಧಿಸಿದ್ದಾರೆ.

ಬಾಣಸವಾಡಿಯ ಮನೆಯೊಂದರಲ್ಲಿ ₹ 79.8 ಲಕ್ಷ ಹಣದೊಡನೆ ಸಿಕ್ಕಿಬಿದ್ದಿರುವ ಆರೋಪಿಯ ಪತ್ನಿ ಎಲ್ವಿನ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಡಾಮಿನಿಕ್ ರಾಯ್‌ಗಾಗಿ ಬಲೆ ಬೀಸಿದ್ದಾರೆ.

ಸೆಕ್ಯುರ್ ಟ್ರಾನ್ಸಿಟ್ ಏಜೆನ್ಸಿಯ ಚಾಲಕನಾಗಿದ್ದ ಡಾಮಿನಿಕ್ ರಾಯ್ ಎರಡು ಬಾಕ್ಸ್‌ಗಳಲ್ಲಿದ್ದ ₹1.37 ಕೋಟಿ ಹಣದೊಂದಿಗೆ ನವೆಂಬರ್‌ 23ರಂದು ಕೆಂಪೇಗೌಡ ರಸ್ತೆಯಿಂದ ಪರಾರಿಯಾಗಿದ್ದ. ಅರಮನೆ ರಸ್ತೆಯ ಮೌಂಟ್ ಕಾರ್ಮೆಲ್ ಕಾಲೇಜು ಬಳಿ ವಾಹನ ಬಿಟ್ಟು ಪತ್ನಿ ಹಾಗೂ ಮಗನ ಜತೆ ಪರಾರಿಯಾಗಿದ್ದ.

Comments are closed.