ಕರ್ನಾಟಕ

“ಪ್ರತಿ ಬಾರಿಯೂ ಕೋಳಿಯನ್ನು ಕೇಳಿ ಮಸಾಲೆಯನ್ನು ಅರಿಯಲು ಆಗುವುದಿಲ್ಲ”: ಮೋದಿಗೆ ಖರ್ಗೆ

Pinterest LinkedIn Tumblr

khargeಬೆಂಗಳೂರು: “ಪ್ರತಿ ಬಾರಿಯೂ ಕೋಳಿಯನ್ನು ಕೇಳಿ ಮಸಾಲೆಯನ್ನು ಅರಿಯಲು ಆಗುವುದಿಲ್ಲ” ಇದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಹದಾಯಿ ವಿಚಾರದಲ್ಲಿ ಮೋದಿಗೆ ಟಾಂಗ್ ನೀಡಿದ್ದು ಹೀಗೆ.

ಹೈದ್ರಾಬಾದ್-ಕರ್ನಾಟಕ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ಕುಮಾರಕೃಪಾ ಅತಿಥಿ ಗೃಹದಲ್ಲಿ ನಡೆಯಿತು. ಬಳಿಕ ಮಾತನಾಡಿದ ಖರ್ಗೆ, ಗೋವಾದಲ್ಲಿ ಚುನಾವಣೆ ಬರುತ್ತಿರುವದರಿಂದ ಅಲ್ಲಿನ ಸಿಎಂ ಲಕ್ಷ್ಮೀಕಾಂತ್ ಪರ್ಸೇಕರ್ ಸಭೆಯನ್ನು ಮುಂದೂಡುತ್ತಿದ್ದಾರೆ. ಗೋವಾ ಸಿಎಂರವರ ನಡೆಯು ಅನುಮಾನ ತರುತ್ತಿದೆ ಎಂದು ಹೇಳಿದರು.

ಗೋವಾ ಸಿಎಂ ಮಹದಾಯಿ ವಿಚಾರವಾಗಿ ಸ್ಪಂದಿಸಬೇಕು. ಮಹದಾಯಿ ಸಭೆಯನ್ನು ಇನ್ನೆಷ್ಟು ದಿನ ಮುಂದೆ ಹಾಕುತ್ತಾರೆಂದು ಸಂಶಯ ಬರುತ್ತಿದೆ. ಪ್ರಧಾನಿ ಮೋದಿಯವರು ಗೋವಾ ಸಿಎಂ ರಿಗೆ ಕಿವಿಮಾತು ಹೇಳಬೇಕು. ಆದರೆ ಮೋದಿ ಸಾಹೇಬ್ರು ಚುನಾವಣೆ ಮುಗಿಯುವರೆಗೂ ಹೇಳುವ ಹಾಗೆ ಕಾಣುತ್ತಿಲ್ಲ. ಈ ವಿಚಾರದಲ್ಲಿ ಪ್ರತಿಪಕ್ಷದವರನ್ನು ಒಪ್ಪಿಸುವ ಕೆಲಸ ಮುಗಿದಿದೆ. ಪ್ರತಿ ಬಾರಿಯೂ ಕೋಳಿ ಕೇಳಿ ಮಸಾಲೆ ಅರಿಯೋಕಾಗುವುದಿಲ್ಲ ಎಂದು ಹೇಳುವ ಮೂಲಕ ಮೋದಿಯನ್ನು ತರಾಟೆಗೆ ತೆಗೆದುಕೊಂಡರು.

ಈ ಸಭೆಯಲ್ಲಿ ಕಾಂಗ್ರೆಸ್‍ನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಹೈದ್ರಾಬಾದ್- ಕರ್ನಾಟಕ ಅಭಿವೃದ್ದಿಗೆ ಮೀಸಲಿಟ್ಟರುವ ಶೇ.80 ರಷ್ಟು ಹಣವನ್ನು ಖರ್ಚು ಮಾಡಲಾಗಿದೆ, ಉಳಿದ ಹಣವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಆರ್ಥಿಕ ಇಲಾಖೆ ಭರವಸೆ ನೀಡಿದೆ. ಬ್ಯಾಕ್‍ಲಾಗ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು. ರಾಜ್ಯ ಸರ್ಕಾರ ಉತ್ತಮವಾಗಿ ಸ್ಪಂದಸುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರಾದ ಈಶ್ವರ ಖಂಡ್ರೆ, ಶರಣ ಪ್ರಕಾಶ ಪಾಟೀಲ ಮತ್ತಿತ್ತರು ಉಪಸ್ಥಿತರಿದ್ದರು.

Comments are closed.