ಕರ್ನಾಟಕ

ಕಾವೇರಿ ವಿವಾದದಲ್ಲಿ ಕೇಂದ್ರವು ನಮ್ಮ ವಿರುದ್ಧ ಇದೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಸಮಾಧಾನ

Pinterest LinkedIn Tumblr

g-parameshwaraಬೆಂಗಳೂರು: ಕಾವೇರಿ ವಿವಾದ ಬಗೆಹರಿಸಲು ಹಲವು ಬಾರಿ ಪ್ರಧಾನಿಯವರ ಮಧ್ಯಸ್ಥಿಕೆಗಾಗಿ ಮನವಿ ಸಲ್ಲಿಸಿದ್ದೇವೆ. ಆದರೂ ಅವರ ಮಧ್ಯಸ್ಥಿಕೆ ಸಾಧ್ಯವಾಗಿಲ್ಲ. ಅಟಾರ್ನಿ ಜನರಲ್ ಕೂಡ ಕಾವೇರಿ ನಿರ್ವಹಣಾ ಮಂಡಳಿ ರಚಿಸುವುದಾಗಿ ತಿಳಿಸಿರುವುದನ್ನು ಗಮನಿಸಿದರೆ ಕೇಂದ್ರ ಸರ್ಕಾರ ಕೂಡಾ ನಮ್ಮ ವಿರುದ್ದ ಇದೆ ಎನಿಸುತ್ತಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.

ಹಿರಿಯ ರಾಜಕಾರಣಿ ಹೆಚ್.ಡಿ ದೇವೇಗೌಡರು ತಮ್ಮ ಜೀವನದುದ್ದಕ್ಕೂ ಕಾವೇರಿ ನೀರಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಈ ವಯಸ್ಸಿನಲ್ಲಿಯೂ ನೀರಿಗಾಗಿ ಉಪವಾಸ ಕುಳಿತಿರುವ ಅವರ ಉದ್ದೇಶವನ್ನು ಕೇಂದ್ರ ಸರ್ಕಾರ ಹಾಗೂ ಸುಪ್ರಿಂಕೋರ್ಟ್ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸೆಪ್ಟೆಂಬರ್ ಒಂದೇ ತಿಂಗಳಿನಲ್ಲಿ ಆರು ಬಾರಿ ತೀರ್ಪು ನೀಡಿರುವ ಸುಪ್ರಿಂ ಕೋರ್ಟ್ ಪದೇ ಪದೇ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿದೆ. ನಿನ್ನೆ ಮತ್ತೆ ೬೦೦೦ ಸಾವಿರ ಕ್ಯುಸೆಕ್ ನೀರು ಬಿಡುವಂತೆ ಆದೇಶ ನೀಡಿರುವುದು ಆಘಾತದ ಸಂಗತಿ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿಯವರೆಗೂ ಕಾವೇರಿಗಾಗಿ ಎಲ್ಲರೂ ಒಟ್ಟಾಗಿ ಪಕ್ಷಬೇಧ ಮರೆತು ಹೋರಾಟ ಮಾಡಿದ್ದೇವೆ. ಪರಿಸ್ಥಿತಿಯನ್ನು ಕೋರ್ಟ್ ಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನೂ ಮಾಡಿದ್ದೇವೆ. ಕರ್ನಾಟಕ ಪರ ವಕೀಲ ನಾರೀಮನ್ ಕುರಿತಾಗಿಯೂ ಚರ್ಚಿಸಬೇಕಾದ ಅಗತ್ಯವಿದ್ದು, ಇಂದು ಸಿಎಂ ಸಿದ್ದರಾಮಯ್ಯನವರು ಕರೆದಿರುವ ಸವ೯ಪಕ್ಷ ಸಭೆಯಲ್ಲಿ ಎಲ್ಲಾ ವಿಚಾರಗಳ ಕುರಿತು ಕೂಲಂಕುಷವಾಗಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Comments are closed.