ಅಂತರಾಷ್ಟ್ರೀಯ

ರೆಸ್ಟೋರೆಂಟ್ ಮಹಿಳಾ ಉದ್ಯೋಗಿ 100 ರೂ. ಜ್ಯೂಸ್​ ಕುಡಿದಿದ್ದಕ್ಕೆ 2.50 ಕೋಟಿ ದಂಡ!

Pinterest LinkedIn Tumblr

orange-juice-medಹೋಟೆಲ್, ಜ್ಯೂಸ್ ಪಾಯಿಂಟ್ ಮತ್ತು ರೆಸ್ಟೋರೆಂಟ್ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಆರಾಮವಾಗಿ ಬೇಕಾದ್ದು ತಿಂದುಕೊಂಡು ಇರುತ್ತಾರೆ ಎಂದು ನಾವಂದುಕೊಂಡಿರುತ್ತೇವೆ. ಹೇಗೂ ತಿಂಡಿ-ತಿನಿಸು, ಜ್ಯೂಸ್ ಅಲ್ಲಿಯೇ ಇರುವಾಗ ತಯಾರಿಸಿ ತಿಂದರೆ, ಕುಡಿದರೆ ಏನು ಎಂದು ಕೇಳುವವರೂ ಇರುತ್ತಾರೆ. ಆದರೆ ಅಮೆರಿಕದ ರೆಸ್ಟೋರೆಂಟ್ಗಳಲ್ಲಿ ಅಲ್ಲಿನ ಉದ್ಯೋಗಿಗಳು ಹಾಗೆಲ್ಲ ಮಾಡುವಂತಿಲ್ಲ, ಅವರಿಗೆ ಏನಾದರೂ ಬೇಕೆನಿಸಿದರೆ ಅದರ ಮೊತ್ತವನ್ನು ಪಾವತಿಸಿಯೇ ತೆಗೆದುಕೊಳ್ಳಬೇಕು ಎಂಬ ನಿಯಮವಿದೆ.

ವಾಷಿಂಗ್ಟನ್ನಲ್ಲಿರುವ ರೆಸ್ಟೋರೆಂಟ್ನ ಈ ನಿಯಮವೊಂದು ಅವರಿಗೇ ಮುಳುವಾಗಿದೆ. ಮಾತ್ರವಲ್ಲದೆ ಅತ್ಯಂತ ದುಬಾರಿಯಾಗಿ ಪರಿಣಮಿಸಿದೆ. ಡಾಲರ್ ಜನರಲ್ ಹೆಸರಿನ ರೆಸ್ಟೋರೆಂಟ್ ಒಂದರ ಮಹಿಳಾ ಉದ್ಯೋಗಿಗೆ ಸಕ್ಕರೆ ಕಾಯಿಲೆಯಿದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಊಟ-ತಿಂಡಿ ಮಾಡುತ್ತಿರಬೇಕಾಗುತ್ತದೆ. ತಪ್ಪಿದರೆ ತೊಂದರೆ ಕಾಣಿಸಿಕೊಳ್ಳುತ್ತದೆ. ಹಾಗೆಂದು ಅವರು ತಾವಿದ್ದ ರೆಸ್ಟೋರೆಂಟ್ನಲ್ಲಿ ಸುಮಾರು 100 ರೂ. ಬೆಲೆಯ ಆರೆಂಜ್ ಜ್ಯೂಸ್ ಒಂದನ್ನು ಹಣ ಪಾವತಿಸುವುದಕ್ಕೂ ಮೊದಲೇ ಕುಡಿದಿದ್ದಾರೆ. ಬಳಿಕ ಅದಕ್ಕೆ ಪಾವತಿ ಮಾಡಿದ್ದಾರೆ. ತನ್ನ ಉದ್ಯೋಗಿಯ ಈ ವರ್ತನೆಗೆ ರೆಸ್ಟೋರೆಂಟ್ನ ವಿವಿಧ ಹಂತದ ಅಧಿಕಾರಿಗಳಿಂದ ನಿಂದನೆ ಮತ್ತು ಬೈಗುಳ ಸಿಕ್ಕಿದೆ.

ಇದರಿಂದ ಬೇಸತ್ತ ಆಕೆ ಅಮೆರಿಕದ ಉದ್ಯೋಗಿಗಳ ಸಮಾನತೆ ಮತ್ತು ಅವಕಾಶಗಳ ಆಯೋಗಕ್ಕೆ ದೂರು ನೀಡಿದ್ದಾಳೆ. ಪ್ರಕರಣ ಪರಿಶೀಲಿಸಿ ವಿಚಾರಣೆ ನಡೆಸಿದ ಆಯೋಗವು, ರೆಸ್ಟೋರೆಂಟ್ ಆಕೆಗೆ 1.84 ಕೋಟಿ ರೂ. ಪರಿಹಾರದ ರೂಪದಲ್ಲಿ ನೀಡಬೇಕೆಂದು ಆದೇಶಿಸಿದೆ ಮತ್ತು ಹೆಚ್ಚುವರಿಯಾಗಿ 1.66 ಕೋಟಿ ರೂ. ನಷ್ಟ ಭರಿಸುವಂತೆ ತಿಳಿಸಿದೆ. ಹೀಗೆ 100 ರೂ. ಬೆಲೆಯ ಜ್ಯೂಸ್ ವಿಚಾರದಲ್ಲಿ ಉದ್ಯೋಗಿಗೆ ಕಿರುಕುಳ ನೀಡಿದ್ದ ರೆಸ್ಟೋರೆಂಟ್ ಇದೀಗ ದುಬಾರಿ ಮೊತ್ತವನ್ನು ದಂಡ ಮತ್ತು ಪರಿಹಾರದ ರೂಪದಲ್ಲಿ ಪಾವತಿಸಬೇಕಾಗಿ ಬಂದಿದೆ.

Comments are closed.