ಕರ್ನಾಟಕ

ಮಂಕು ಕವಿದ ಮೈಸೂರು ದಸರ

Pinterest LinkedIn Tumblr
Dasara elephants being welcomed for Mysore dasara festival at Palace in Mysore on Monday.-KPN
Dasara 

ಮೈಸೂರು,ಅ.೧- ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಹಿರಿಯ ಸಾಹಿತಿ ನಾಡೋಜ ಚನ್ನವೀರ ಕಣವಿಯವರು ಚಾಮುಂಡಿಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಕಾವೇರಿ ಮತ್ತು ಮಹದಾಯಿ ವಿವಾದದ ಕರಿನೆರಳು ಈ ಬಾರಿಯ ದಸರಾ ಸಂಭ್ರಮದ ಮೇಲೆ ಕಂಡು ಬಂದಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಸಹಕಾರ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್, ಶಿಕ್ಷಣ ಸಚಿವ ತನ್ವೀರ್ ಸೇಠ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಜವಳಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ, ಶಾಸಕ ಜಿ.ಟಿ.ದೇವೇಗೌಡ ಮತ್ತಿತರರು ಭಾಗವಹಿಸಿದ್ದರು.
ಕಾವೇರಿ ನದಿ ನೀರಿನ ವಿವಾದದ ಹೋರಾಟದ ಕರಿನೆರಳು ದಸರಾ ಸಂಭ್ರಮದ ಸಂತಸಕ್ಕೆ ತಣ್ಣೀರು ಎರಚಿದ್ದು, ಈ ಬಾರಿ ದಸರಾವನ್ನು ಸಾಂಪ್ರದಾಯಿಕವಾಗಿ, ಸರಳವಾಗಿ ಆಚರಿಸಲಾಗುತ್ತಿದೆ. ಪ್ರವಾಸಿಗರ ಕೊರತೆಯೂ ಮೈಸೂರಿನಲ್ಲಿ ಎದ್ದು ಕಾಣುತ್ತಿದೆ.

Comments are closed.