ಬೆಂಗಳೂರು: ಪ್ರತಿ ವಾರ ವಾರ ದಿನಾಂಕ ನಿಗದಿ ಪಡಿಸಿ ತಮಿಳುನಾಡಿಗೆ ನೀರು ಬಿಡಿ ಎಂದು ಪದೇ ಪದೇ ನೀರು ಬಿಡಲು ಸುಪ್ರೀಂಕೋಟ್೯ ಅದೇಶ ನೀಡುತ್ತಲೇ ಬಂದಿದೆ. ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ನೀವಿದ್ದೀರಿ ಎಂದು ಕನಾ೯ಟಕಕ್ಕೆ ಹೇಳುತ್ತದೆ. ಆದರೆ ಕನಾ೯ಟಕ ಒಕ್ಕೂಟ ವ್ಯವಸ್ಥೆಯಲ್ಲಿ ಇರಬೇಕೋ ಬೇಡವೋ?
ತಮಿಳುನಾಡಿನ ಬಿಳಿಗುಂಡ್ಲುವಿನಲ್ಲಿ ೨ ಟಿಎಂಸಿ ಹೆಚ್ಚಿನ ನೀರು ಸಂಗ್ರಹವಾಗಿದೆ. ಕಳೆದ ೧ ತಿಂಗಳಲ್ಲಿ ರಾಜ್ಯದಲ್ಲಿ ಪ್ರತಿಭಟನೆ ನಡೆಯುತ್ತಿವೆ. ಪ್ರತಿಭಟನೆಯಿಂದ ರಾಜ್ಯಕ್ಕೆ ತುಂಬಾ ನಷ್ಟ ಆಗಿದೆ. ಆದ್ದರಿಂದ ಪ್ರತಿಭಟನಾಕಾರರು ಅಥ೯ ಮಾಡಿಕೊಳ್ಳಿ. ಶಾಂತಿಯುತವಾಗಿ ಪ್ರತಿಭಟನೆ ಮಾಡಿ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.
ಆರೋಗ್ಯದ ತೊಂದರೆ ಇದ್ದರೂ ದೇವೇಗೌಡರು ಉಪವಾಸ ಸತ್ಯಾಗ್ರಹ ಧರಣಿ ಮಾಡ್ತಿದ್ದಾರೆ. ನಿನ್ನೆ ರಾತ್ರಿ ರಾಜ್ಯದ ಸಂಕಷ್ಟ ನೋಡಿ ಕಣ್ಣೀರು ಹಾಕಿದ್ದಾರೆ. ದೇವೇಗೌಡರು ಜೀವ ಬಲಿಕೊಟ್ಟಾದ್ರೂ ಕಾವೇರಿ ಉಳಿಸುತ್ತೇನೆ ಎಂದು ಪಣ ತೊಟ್ಟಿದ್ದಾರೆ. ಕೆ.ಆರ್.ಎಸ್ ಡ್ಯಾಮ್ ಗೆ ಕೇಂದ್ರ ಸಕಾ೯ರ ಒಂದು ಬಿಡಿಗಾಸು ಕೊಟ್ಟಿಲ್ಲ. ಚಿನ್ನ ಅಡವಿಟ್ಟು ಆಣೆಕಟ್ಟು ಕಟ್ಟಿದ್ದೇವೆ.
ಮಂಗಳವಾರದೊಳಗೆ ಕಾವೇರಿ ನಿವ೯ಹಣಾ ಮಂಡಳಿ ರಚಿಸಿ ಎಂದು ನೀಡಿರುವ ಆದೇಶ ಅಧಿಕಾರದ ವ್ಯಾಪ್ತಿ ಮೀರಿದ ಅದೇಶ. ಅಕ್ಟೋಬರ್ ೧೮ ಕ್ಕೆ ತ್ರಿಸದಸ್ಯ ಪೀಠದ ಮುಂದೆ ಅಜಿ೯ ಬರುತ್ತದೆ ಅನ್ನೋದು ಗಮನದಲ್ಲಿಲ್ಲ. ಕೇಂದ್ರದ ಅಟಾನಿ೯ ಜನರಲ್ ಕೂಡಾ ೩ ದಿನದಲ್ಲಿ ಕಾವೇರಿ ನಿವ೯ಹಣಾ ಮಂಡಳಿ ರಚಿಸುತ್ತೇವೆ ಅಂತ ಒಪ್ಪಿಕೊಂಡಿದ್ದಾರೆ. ಇವರು ಹೇಗೆ ಒಪ್ಪಿಕೊಂಡರು? ಇದರಲ್ಲಿ ಯಾರ ಕೈವಾಡ ಇದೆ? ಪ್ರತಿಭಟನಾಕಾರರು ರಸ್ತೆಗಿಳಿದು ಅನಾಹುತಕ್ಕೆ ಅವಕಾಶ ಕೊಡಬೇಡಿ.
ಇತ್ತ ಸತ್ತರೂ ಪರವಾಗಿಲ್ಲ ಅಂತ ದೇವೇಗೌಡರು ರಾತ್ರಿ ನಿಧಾ೯ರ ಮಾಡಿದ್ದಾರೆ. ದೇವೆಗೌಡರನ್ನ ದೇವರೇ ಕಾಪಾಡಲಿ ಎಂದು ನಾನೂ ಹೇಳಿದ್ದೇನೆ. ರಾಜ್ಯದ ಪ್ರತಿ ಮೂಲೆಯಲ್ಕೂ ಉಪವಾಸ ಕುಳಿತುಕೊಳ್ಳಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡಬಾರದು.ಕೇಂದ್ರ ಸಕಾ೯ರ ಡಿಸ್‍ಮಿಸ್ ಮಾಡಲಿ ಪರವಾಗಿಲ್ಲ. ೨೭ ಲೋಕಸಭಾ ಸದಸ್ಯರು ರಾಜೀನಾಮೆ ನೀಡಲಿ. ಹಾಗಾದರೆ ಮಾತ್ರ ಕೇಂದ್ರ ಸಕಾ೯ರ ಮಧ್ಯಸ್ಥಿಕೆ ವಹಿಸುತ್ತದೆ.
ನಾರಿಮನ್ ಅವರು ವಾದ ಮಾಡದಿದ್ದರೂ ಪರವಾಗಿಲ್ಲ. ನಮ್ಮಲ್ಲೇ ಎಷ್ಟೋ ಜನ ಕಾನೂನು ತಜ್ಞರಿದ್ದಾರೆ. ನಿವೃತ್ತ ನ್ಯಾಯಾಧೀಶರಿದ್ದಾರೆ. ಬೇರೆ ವಕೀಲರ ತಂಡ ರಚಿಸಿ ಕಾವೇರಿ ವಿಚಾರದಲ್ಲಿ ಕಠಿಣ ನಿಲುವು ತಾಳಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.