ಕರ್ನಾಟಕ

ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರಿಗೆ ಚಾಲನೆ

Pinterest LinkedIn Tumblr

Mysuru Royal Scion Yaduveer Krishnadatta Chamaraja Wadiyar's private dusbar, as part of Dasara Celebrations, at Mysuru Palace in Mysuru on Saturday October 01, 2016 -Photo / IRSHAD MAHAMMAD

ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಸನೆಯಲ್ಲಿ ಇಂದಿನಿಂದ ನಡೆಯಲಿರುವ ಖಾಸಗಿ ದರ್ಬಾರ್ ಹಾಗೂ ವಿವಿಧ ಪೂಜಾ ಕೈಂಕರ್ಯದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಸಕ್ರಿಯವಾಗಿ ಪಾಲ್ಕೊಂಡು ಖಾಸಗಿ ದರ್ಬಾರಿಗೆ ಚಾಲನೆ ನೀಡಿದರು.

ನವರಾತ್ರಿಯ ಮೊದಲ ದಿನವಾದ ಇಂದು ಬೆಳಿಗ್ಗೆ 5.50 ರಿಂದ 6.10 ರವರೆಗೆ ದರ್ಬಾರ್ ಹಾಲ್ ನಲ್ಲಿ ಅಳವಡಿಸಲಾಗಿರುವ ಸಿಂಹಾಸನಕ್ಕೆ ಸಿಂಹದ ಜೋಡಣೆ ಮಾಡಲಾಯಿತು. 7 ರಿಂದ 7.20 ರ ಅವದಿಯಲ್ಲಿ ಅರಮನೆಯ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಅವರಿಗೆ ಕಂಕಣ ಧಾರಣೆ ಮಾಡಲಾಯಿತು. ನಂತರ ವಾಣಿ ವಿಲಾಸ ದೇವರ ಮನೆಯಲ್ಲಿ ತ್ರಿಷಿಕಾ ಕುಮಾರಿ ಗೆ ಕಂಕಣ ಧಾರಣೆ ಮಾಡಲಾಯಿತು. ಬೆಳಿಗ್ಗೆ 11 ಗಂಟೆಗೆ ಅರಮನೆಯಲ್ಲಿ ಪಟ್ಟದ ಆನೆ, ಕುದುರೆ ಮತ್ತು ಹಸು ಆಗಮಿಸಿದವು. 11.30ಕ್ಕೆ ಕಳಸ ಪೂಜೆ ನೆರವೇರಿದ ನಂತರ ಸಿಂಹಾಸನ ರೋಹಣಕ್ಕೆ ಸಂಬಂಧಿಸಿದ ಪೂಜಾ ಕೈಂಕರ್ಯಗಳು ನೆರವೇರಿದವು. 11.45 ರಿಂದ 12.30 ರೊಳಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಸಿಂಹಾಸನವನ್ನು ಏರಿದರು. ಮಧ್ಯಾಹ್ನ 12.50 ರಿಂದ 1.20 ರ ಅವದಿಯಲ್ಲಿ ಚಾಮುಂಡೇಶ್ವರಿ ಮೂರ್ತಿಯನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ತರಲಾಯಿತಿ.

ಈ ಸಂದರ್ಭದಲ್ಲಿ ಯದುವೀರ್ ರವರು ಹಿಂದಿನ ಸಾಂಪ್ರದಾಯಕದಂತೆ ಸಿಂಹಾಸನಕ್ಕೆ ಪೂಜೆ ಸಲ್ಲಿಸಿದ ನಂತರ ಸಿಂಹಾಸನವನ್ನೇರಿದರು. ಯದುವೀರ್ ರವರು ರಾಜ ಪೋಷಾಕು ತೊಟ್ಟು ಕಂಗೊಳಿಸುತ್ತಿದ್ದರು. ಇಂದಿನಿಂದ ಆರಂಭಗೊಳ್ಳುವ ದಸರಾ ಉತ್ಸವವು 11 ದಿನಗಳ ಕಾಲ ನಡೆಯಲಿದೆ.

ಯದುವೀರ್ ರವರ ಸಿಂಹಾಸ ರೋಹಣ ಮಾಡಿದ ಸಂದರ್ಭದಲ್ಲಿ ಅರಮನೆ ಪುರೋಹಿತರು ಗೌರವ ಸಲ್ಲಿಸಿದರು. ಹೊಗಳು ಭಟ್ಟರು ಯದುವೀರ್ ರವರಿಗೆ ಪರಾಕ್ ಹೇಳಿದರು.

ಸಂಜೆ 7 ಗಂಟೆಗೆ ಮತ್ತೊಮ್ಮೆ ಖಾಸಗಿ ದರ್ಬಾರ್ ನಡೆಯಲಿದ್ದು, ನಾಳೆಯಿಂದ ಅ.10 ರವರೆಗೆ ಪ್ರತಿ ದಿನ ಸಂಜೆ 7 ಗಂಟೆಗೆ ಖಾಸಗಿ ದರ್ಬಾರ್ ನಡೆಯುವುದು.

Comments are closed.