
ಮಂಡ್ಯ: ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ್ದು ಯಜಮಾನನ ಪಾತ್ರವಿದೆ. ಕಾವೇರಿ ವಿಷಯವಾಗಿ ಅದನ್ನು ನಿರ್ವಹಿಸುವಲ್ಲಿ ಕೇಂದ್ರ ವಿಫಲವಾಗಿದೆ ಎಂದು ಸಾಹಿತಿ ಕೆ.ಮರಳುಸಿದ್ದಪ್ಪ ಟೀಕಿಸಿದರು.
ಕಾವೇರಿ ವಿಷಯವಾಗಿ ಗುರುವಾರ ಕರ್ನಾಟಕ ಸಾಹಿತಿ ಕಲಾವಿದರ ಒಕ್ಕೂಟದಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಷ್ಟ್ರದ ನಾಯಕರು. ಪಕ್ಷದ ಲಾಭ ನಷ್ಟ ಲೆಕ್ಕ ಹಾಕಬಾರದು ಎಂದು ವಾಗ್ದಾಳಿ ನಡೆಸಿದರು.
ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ಕೇಂದ್ರ ಮಲತಾಯಿ ಧೋರಣೆ ತಾಳಿದೆ ಎಂದು ಟೀಕಿಸಿದರು.
ಆಗ ಮಧ್ಯ ಪ್ರವೇಶಿಸಿದ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಮಾತನಾಡಿ, ಸಿದ್ದರಾಮಯ್ಯ ಅವರ ಬಗ್ಗೆ ಗೌರವವಿತ್ತು. ಅದನ್ನು ಉಳಿಸಿಕೊಳ್ಳಲಿಲ್ಲ. ಅಧಿಕಾರಿಗಳಿಗೆ ಭಯವಿಲ್ಲ. ಮಂಡ್ಯ ಸಂಸದ ರಾಜೀನಾಮೆ ನೀಡಿದ್ದಾರೆ. ಅಂತವರು ಬೇಕು. ಮಾತನಾಡುವ, ಸುಳ್ಳು ಹೇಳುವವರು ಬೇಕಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
Comments are closed.