
ಹೊಸದಿಲ್ಲಿ: ರಿಲಯನ್ಸ್ ಜಿಯೋ ಉಚಿತ ಕರೆ ಹಾಗೂ ಕಡಿಮೆ ದರದಲ್ಲಿ ಇಂಟರ್ನೆಟ್ ಸೌಲಭ್ಯ ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ, ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಹ ಉಚಿತ ಕರೆ ಯೋಜನೆಯನ್ನು ಪರಿಚಯಿಸಲು ಮುಂದಾಗಿದೆ.
ಜಿಯೋಯಿಂದ ಭಾರತೀಯ ಸಂಪರ್ಕ ಮಾರುಕಟ್ಟೆಯಲ್ಲಿ ವಿಪರೀತ ಸ್ಪರ್ಧೆ ಏರ್ಪಟ್ಟಿದ್ದು, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ದೂರವಾಣಿ ಕಂಪನಿಗಳು ವಿವಿಧ ಆಫರ್ ನೀಡುತ್ತಿವೆ.
ಜಿಯೋಗೆ ಸೆಡ್ಡು ಹೊಡೆಯಲು ಬಿಎಸ್ಎನ್ಎಲ್ ಉಚಿತ ಕರೆ ಯೋಜನೆಯನ್ನು ನೀಡುತ್ತಿದ್ದು, ಈ ಯೋಜನೆ ಜಿಯೋನಂತೆ ಕೇವಲ 4ಜಿ ಬಳಕೆದಾರರಿಗೆ ಮಾತ್ರವಲ್ಲ, ಬದಲಾಗಿ 2ಜಿ ಹಾಗೂ 3ಜಿ ಬಳಸುವವರಿಗೆ ಅನುಕೂಲವಾಗಿದೆ,
‘ಜಿಯೋ ಹೇಗೆ ಸೇವೆ ಒದಗಿಸಲಿದೆ ಎಂಬುದನ್ನು ಗಮನಿಸುತ್ತಿದ್ದೇವೆ. ಮಾರುಕಟ್ಟೆಯಲ್ಲಿನ ಬದಲಾವಣೆಯನ್ನು ಗಮನಿಸಿ, ಹೊಸ ವರ್ಷದಲ್ಲಿ ಜೀವಮಾನ ಉಚಿತ ಕರೆ ಯೋಜನೆಯನ್ನು ಪರಿಚಯಿಸುತ್ತೇವೆ,’ ಎಂದು ಬಿಎಸ್ಎನ್ಎಲ್ ಮುಖ್ಯಸ್ಥ ಮತ್ತು ಎಂಡಿ ಅನುಪಮ್ ಶ್ರೀವಾತ್ಸವ್ ಟೈಮ್ಸ್ ಆಫ್ ಇಂಡಿಯಾಗೆ ಹೇಳಿದ್ದಾರೆ.
‘ಕಡಿಮೆ ದರದಲ್ಲಿ ಯೋಜನೆಗಳನ್ನು ಪರಿಚಯಿಸುತ್ತಿದ್ದು, ಅದು ಜಿಯೋಗಿಂದ 2-4ರೂ. ಕಡಿಮೆಯಾಗಿರುತ್ತದೆ,’ ಎಂದರು.
‘ಮನೆಯಲ್ಲಿ ಬಿಎಸ್ಎನ್ಎಲ್ ಮೊಬೈಲ್ ಬ್ರಾಡ್ಬ್ಯಾಂಡ್ ಸಂಪರ್ಕ ಇರುವ ಗ್ರಾಹಕರು ಇಂಥ ಸೌಲಭ್ಯವನ್ನು ಪಡೆಯಬಹುದು. ಜನರು ಬಹು ಸಮಯವನ್ನು ಮನೆಯಲ್ಲಿಯೇ ಕಳೆಯುವುದನ್ನು ಗಮನದಲ್ಲಿಟ್ಟುಕೊಂಡು ಈ ಸೌಲಭ್ಯವನ್ನು ನೀಡಲಾಗುತ್ತದೆ,’ ಎಂದರು..
ಬಿಎಸ್ಎನ್ಎಲ್ನ ಈ ನಿರ್ಧಾರ ಏರ್ಟೆಲ್, ವಡಾಫೋನ್ ಮತ್ತು ಐಡಿಯಾ ಮೇಲೂ ಪ್ರಭಾವ ಬೀರಲಿದ್ದು, ಅವೂ ದರ ಕಡಿತಗೊಳಿಸುವ ಬಗ್ಗೆ ಚಿಂತಿಸುವ ಸಾಧ್ಯತೆಗಳಿವೆ.
Comments are closed.