
ಮೈಸೂರು,ಸೆ,11-ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಅರ್ಜುನ ನೇತೃತ್ವದ ಆನೆಗಳಿಗೆ ಅರಮನೆ ಆವರಣದಲ್ಲಿ ಭಾರದ ತಾಲೀಮು ನಡೆಸಲಾಯಿತು.
ಇಂದು ಬೆಳಗ್ಗೆ ಆರಮನೆ ಆವರಣದಲ್ಲಿ ಅರ್ಜುನ, ಬಲರಾಮ, ಗಜೇಂದ್ರ ಆನೆಗಳಿಗೆ ಮರಳು ಮೂಟೆಗಳ ಬೆನ್ನ ಮೇಲೆ ಇರಿಸಿ ತಾಲೀಮು ನಡೆಸಲಾಯಿತು. ಜಂಬೂ ಸವಾರಿ ವೇಳೆಯಲ್ಲಿ ಅರ್ಜುನ ಅಂಬಾರಿ ಹೊರಲಿದ್ದು, ಇನ್ನಿತರ ಆನೆಗಳು ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಭಾರದ ತಾಲೀಮನ್ನು ದಸರೆಗೆ ಮುನ್ನವೆ ಒಂದು ತಿಂಗಳ ಕಾಲ ನಡೆಸಲಾಗುವುದು.
ದಸರೆಯ ನಂತರ 10 ತಿಂಗಳ ಕಾಲ ಕಾಡಿನ ರಮ್ಯ ವಾತಾವರಣದಲ್ಲಿ ಬೀಡು ಬಿಟ್ಟು ನಂತರ ನಗರ ಪ್ರದೇಶಕ್ಕೆ ಬರುವುದರಿಂದ ಸಹಜವಾಗಿ ಆನೆಗಳ ಮನಸ್ಥಿತಿ ಬದಲಾಗಿರುತ್ತದೆ. ಆ ಹಿನ್ನೆಲೆಯಲ್ಲಿ ನಗರದ ಜೀವನಕ್ಕೆ ಹೊಂದಿಕೊಳ್ಳುವಂತೆ ಪ್ರತಿನಿತ್ಯ ಅರಮನೆ ಆವರಣದಿಂದ ಬನ್ನಿಮಂಟಪದ ವರೆಗೆ ವಿವಿಧ ತಾಲೀಮುಗಳನ್ನು ಆನೆಗಳಿಗೆ ನೀಡಲಾಗುತ್ತದೆ.
Comments are closed.