ಅಂತರಾಷ್ಟ್ರೀಯ

ಕರಾಚಿಯಲ್ಲಿ ಬಲೂಚ್ ಮಾನವ ಹಕ್ಕು ಸಂಘಟನೆಯಿಂದ ಪಾಕ್ ಸೇನೆ ವಿರುದ್ಧ ಪ್ರತಿಭಟನೆ

Pinterest LinkedIn Tumblr

balochistan-1ಕರಾಚಿ: ಪಾಕಿಸ್ತಾನದ ಭಾಗವಾಗಿರುವ ಬಲೂಚಿಸ್ಥಾನ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಂಬಲ ನೀಡಿದ್ದರ ಪರಿಣಾಮವಾಗಿ, ಬಲೂಚ್ ಮಾನವ ಹಕ್ಕು ಸಂಘಟನೆ ಕಾರ್ಯಕರ್ತರು ಕರಾಚಿಯಲ್ಲಿ ಪಾಕಿಸ್ತಾನ ಸೇನೆ ವಿರುದ್ಧ ಸೆ.11 ರಂದು ಪ್ರತಿಭಟನೆ ನಡೆಸಿದ್ದಾರೆ.
ಬೀದಿಗಿಳಿದು ಪಾಕಿಸ್ತಾನದ ಸೇನೆ ವಿರುದ್ಧ ಪ್ರತಿಭಟನೆ ನಡೆಸಿರುವ ಮಾನವ ಹಕ್ಕು ಸಂಘಟನೆಯ ಕಾರ್ಯಕರ್ತರು, ಬಲೂಚಿಸ್ಥಾನದ ಹೋರಾಟಗಾರರಾದ ರೌಫ್ ಬಲೂಚ್ ಅವರಿಗೆ ಪಾಕಿಸ್ತಾನ ಸೇನೆ ಗೃಹ ಬಂಧನ ವಿಧಿಸಿರುವುದನ್ನು ಖಂಡಿಸಿದ್ದಾರೆ.
ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಬಲೂಚಿಸ್ಥಾನದಲ್ಲಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಪ್ರಸ್ತಾಪಿಸಿ, ಅಲ್ಲಿನ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಈ ಬೆಳವಣಿಗೆಯ ನಂತರ ಬಲೂಚಿಸ್ಥಾನದ ಸ್ವಾತಂತ್ರ್ಯ ಹೋರಾಟ ಮಾತಾಷ್ಟು ಹೆಚ್ಚಿದ್ದು, ಇದರ ಭಾಗವಾಗಿ ಸೆ.11 ರಂದು ಕರಾಚಿಯಲ್ಲಿ ಪಾಕಿಸ್ತಾನ ಸೇನೆ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ.

Comments are closed.