ರಾಷ್ಟ್ರೀಯ

ಆದೇಶ ಮಾರ್ಪಾಡು ಕೋರಿ ಸುಪ್ರೀಂಗೆ ಸರಕಾರದ ಅರ್ಜಿ: ಇಂದು ವಿಚಾರಣೆ

Pinterest LinkedIn Tumblr

supreme-courtಹೊಸದಿಲ್ಲಿ : ತಮಿಳುನಾಡಿಗೆ ನೀರು ಬಿಡುವಂತೆ ನೀಡಿರುವ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ರಾಜ್ಯ ಸರಕಾರ ಶನಿವಾರ ರಾತ್ರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಕೋರ್ಟ್‌ ನ ಆದೇಶದಂತೆ ಈಗಾಗಲೇ 66 ಸಾವಿರ ಕ್ಯೂಸೆಕ್‌ ನೀರು ಹರಿಯ ಬಿಟ್ಟಿದ್ದೇವೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡಲು ತೀವ್ರವಾದ ನೀರಿನ ಅಭಾವವಿದೆ. ಹೀಗಾಗಿ ಆದೇಶಕ್ಕೆ ಮಾರ್ಪಾಡು ಮಾಡಬೇಕೆಂದು ಕೋರ್ಟ್‌ನ ರಿಜಿಸ್ಟ್ರಾರ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ.

ಅರ್ಜಿಯ ವಿಚಾರಣೆ ಇಂದು ಬೆಳಗ್ಗೆ ವಿಚಾರಣೆ ನಡೆಯಲಿದ್ದು ಎಲ್ಲರ ಕುತೂಹಲ ಕೋರ್ಟ್ ತೀರ್ಪಿನ ಮೇಲಿದೆ.

50 ಟಿಎಂಸಿ ಕೊಡಿಸಿ ಎಂಬ ತಮಿಳುನಾಡಿನ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ, ತುರ್ತು ಪರಿಹಾರವಾಗಿ 10 ದಿನಗಳಲ್ಲಿ 13 ಟಿಎಂಸಿ (ಪ್ರತಿದಿನ 15 ಸಾವಿರ ಕ್ಯೂಸೆಕ್‌ನಂತೆ) ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಆದೇಶಿಸಿತ್ತು.

&ಉದಯವಾಣಿ

Comments are closed.