ಕರ್ನಾಟಕ

ಪುಟ್‌ ಪುಟ್‌ ಕಂದಮ್ಮಗಳಿಗೂ ಹಾಲಿಡೇ ಪ್ಲೇಸ್‌ ಉಂಟು

Pinterest LinkedIn Tumblr

putಮಕ್ಕಳಿಗೆ ಇಡೀ ದಿನ ಆಟವಾಡಲು ಬಿಟ್ಟರೂ ಖುಷಿಯೇ. ಓದು ಅಂದ್ರೆ ಮಾತ್ರ ಕಷ್ಟ. ಎಲ್ಲಾದರೊಂದು ಕಡೆ ಆಟವಾಡೋಕೆ ಕರೆದುಕೊಂಡು ಹೋಗಿ ಬಿಟ್ಟರಂತೂ ಅದಕ್ಕಿಂತ ದೊಡ್ಡ ಸಂಭ್ರಮ ಮತ್ತೇನಿಲ್ಲ. ಹೀಗೆ ಮಕ್ಕಳನ್ನು ಕರೆದುಕೊಂಡು ಹೋಗಬಹುದಾದ ಎರಡು ಚೆಂದದ ಇನ್‌ಡೋರ್‌ ಆಟದ ಮೈದಾನಗಳ ಪರಿಚಯ ಇಲ್ಲಿದೆ.

ಲೀಪ್‌ ಎನ್‌ ಬೌನ್ಸ್‌
ಮಕ್ಕಳಿಗಾಗಿಯೇ ಇರುವ ಪುಟಾಣಿ ಮಕ್ಕಳ ಬಣ್ಣ ಬಣ್ಣದ ಆಟದ ಮೈದಾನ. ಇಲ್ಲಿ ಎರಡು ಝೋನ್‌ಗಳಿವೆ. ಒಂದು ಕಡ್ಲಿ ಕಬ್‌ ಝೋನ್‌ ಮತ್ತೂಂದು ಬೌನ್ಸಿ ಟೈಗರ್‌ ಝೋನ್‌. ಕಡ್ಲಿ ಕಬ್‌ ಝೋನ್‌ನಲ್ಲಿ ಸ್ವಿಂಗುಗಳು, ಬಾಸ್ಕೆಟ್‌ ಬಾಲ್‌ ಮತ್ತು ಆಟಿಕೆಗಳೆಲ್ಲಾ ಇವೆ. ಈ ಝೋನ್‌ನಲ್ಲಿ 4 ವರ್ಷದ ಒಳಗಿನ ಮಕ್ಕಳು ಆರಾಮಾಗಿ ಆಟವಾಡಬಹುದು. ತುಂಬಾ ಮೃದುವಾದ ನೆಲ ಇರುವುದರಿಂದ ಮಕ್ಕಳು ಬಿದ್ದರೂ ನಗುತ್ತಾರೆ. ಎದ್ದರೂ ಖುಷಿ ಪಡುತ್ತಾರೆ. ಪೋಷಕರು ಆರಾಮಾಗಿರಬಹುದು. ಬೌನ್ಸಿ ಟೈಗರ್‌ ಝೋನ್‌ನಲ್ಲಿ ಸ್ಪೈರಲ್‌ ಸ್ಲೆ„ಡ್‌, ಸ್ಟ್ರೈಟ್‌ ಡಬಲ್‌ ಸ್ಲೆ„ಡ್‌, ಟನೆಲ್‌ ಸ್ಲೆ„ಡ್‌, ಹ್ಯಾಂಗಿಂಗ್‌ ಬ್ರಿಜ್‌, ಜಿಪ್‌ ಲೈನ್‌, ರಾಕ್‌ ಕ್ಲೈಂಬಿಂಗ್‌, ರೋಪ್‌ ಕ್ಲೈಂಬಿಂಗ್‌ ಇತ್ಯಾದಿ ಆಟಗಳಿವೆ. ಈ ಆಟಗಳೆಲ್ಲಾ ನಾಲ್ಕು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳಿಗೆ. ಈ ಆಟದ ಮೈದಾನ ಬಣ್ಣಬಣ್ಣದ ಮೃದುವಾದ ಬಾಲ್‌ಗ‌ಳಿಂದ ಕೂಡಿದೆ. ಅದರ ಮೇಲೆ ಬಿದ್ದರೆ ಮಜವಾಗಿರತ್ತೆ. ಮಕ್ಕಳು ಹಠ ಮಾಡುತ್ತಿದ್ದರೆ ಒಂದ್ಸ ಕರೆದುಕೊಂಡು ಹೋಗಿ.

ಎಲ್ಲಿ- ಬೆನಕ ಟವರ್ಸ್‌, ಮೂರನೇ ಮಹಡಿ, ಚಿಕ್ಕಲ್ಲಸಂದ್ರ, ಉತ್ತರಹಳ್ಳಿ
ದೂ- 080 42064079
ವೆಬ್‌ಸೈಟ್‌- www.leapnbounce.com
ಫೇಸ್‌ಬುಕ್‌- https://www.facebook.com/leapandbounce/

ಮಡಗಾಸ್ಕರ್‌
ಅಲ್ಲೊಂದು ಮಣ್ಣಿನ ತೊಟ್ಟಿ. ಆ ತೊಟ್ಟಿಯೊಳಗೆ ಬಗೆಬಗೆ ಸಾಮಾನು. ಅಷ್ಟು ಕಣ್ಣಿಗೆ ಬಿದ್ದರೆ ಸಾಕು ಪುಟಾಣಿಗಳು ಓಡಿ ಹೋಗಿ ಆಟವಾಡತೊಡಗುತ್ತಾರೆ. ಅಲ್ಲಿ ಕೂರಬಹುದು. ಓಡಬಹುದು. ಆಡಬಹುದು. ಮಡಗಾಸ್ಕರ್‌ ಇನ್‌ಡೋರ್‌ ಆಟದ ಮೈದಾನದ ವಿಶೇಷತೆಯೇ ಅದು. ಅಲ್ಲಿ ಮಕ್ಕಳು ಅವರ ಪಾಡಿಗೆ ಆಟವಾಡುತ್ತಾ ಇರುತ್ತಾರೆ. ಅಲ್ಲಿ ಪುಟಾಣಿ ಕುದುರೆ ಇದೆ. ಪುಟ್ಟ ಮನೆ ಇದೆ. ಮುದ್ದಾದ ಸಣ್ಣಸಣ್ಣ ವಾಹನಗಳಿವೆ. ಬಾಲ್‌ಗ‌ಳ ರಾಶಿ ಇದೆ. ತೂಗಲು ಜೋಕಾಲಿ ಇದೆ. ಕುಣಿದು ಕುಪ್ಪಳಿಸಲು ಗಾಳಿ ತುಂಬಿದ ಬಲೂನ್‌ ಇದೆ. ಮಣ್ಣು ತುಂಬಿಸುವ ವಾಹನವಿದೆ. ಹೀಗೆ ಪುಟ್ಟ ಕಂದಮ್ಮಗಳು ಸಂಭ್ರಮಿಸಲು ಏನೇನು ಬೇಕೋ ಅವೆಲ್ಲಾ ಇವೆ. ಹಾಗಾಗಿ ಪುಟಾಣಿ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಿ ಆಟವಾಡಿಸುವ ಯೋಚನೆ ಯೋಜನೆ ಇರುವವರು ಮಡಗಾಸ್ಕರ್‌ನ ಒಮ್ಮೆ ನೋಡಬಹುದು.
ಎಲ್ಲಿ- 2ನೇ ಮಹಡಿ, 3ನೇ ಹಂತ, 4ನೇ ಬ್ಲಾಕ್‌, ಬಸವೇಶ್ವರ ನಗರ
ದೂ- 9741404344
ಫೇಸ್‌ಬುಕ್‌-https://www.facebook.com/madagascarkidsindia/
ವೆಬ್‌ಸೈಟ್‌-www.madagascarkids.com

-ಉದಯವಾಣಿ

Comments are closed.