ಕರ್ನಾಟಕ

ಮಗು ಮಲಗಿಸಿ ಚಿರನಿದ್ರೆಗೆ ಜಾರಿದ ದಂಪತಿ

Pinterest LinkedIn Tumblr

crime-1ಬೆಂಗಳೂರು, ಸೆ. ೧೦ – ಒಂದು ವರ್ಷದ ಮಗುವನ್ನು ಮಲಗಿಸಿ ತಂದೆ – ತಾಯಿ ಇಬ್ಬರೂ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಪೀಣ್ಯದ ನೆಲಗದರನಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಚೊಕ್ಕಸಂದ್ರದ ಗಂಗಾಧರ (32) ಹಾಗೂ ಅವರ ಪತ್ನಿ ವೀಣಾ 28 ಇಬ್ಬರು ನೆಲಗದರನಹಳ್ಳಿಯ ಮನೆಯಲ್ಲಿ ಮಗುವನ್ನು ಮಲಗಿಸಿ ನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚೊಕ್ಕಸಂದ್ರದಲ್ಲಿ ಮನೆಗಳನ್ನು ಬಾಡಿಗೆಗೆ ಬಿಟ್ಟು ವಾಸಿಸುತ್ತಿದ್ದ ಗಂಗಾಧರ ಅವರು ನಾಲ್ಕು ವರ್ಷಗಳ ಹಿಂದೆ ವೀಣಾ ಅವರನ್ನು ವಿವಾಹವಾಗಿದ್ದು, ದಂಪತಿಗೆ ಒಂದು ವರ್ಷದ ಗಂಡು ಮಗುವಿದೆ.
ಕೆಲ ದಿನಗಳಿಂದ ಯಕೃತಿನ ತೊಂದರೆಯಿಂದ ಬಳಲುತ್ತಿದ್ದ ಅವರು ಮಾನಸಿಕ ಖಿನ್ನತೆಗೊಳಗಾಗಿದ್ದು, ಸಹೋದರರ ಬಳಿ ಸಾಯುವುದಾಗಿ ಹೇಳಿಕೊಳ್ಳುತ್ತಿದ್ದರು. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತಾದರೂ ಮಾನಸಿಕ ಖಿನ್ನತೆ ಸರಿಹೋಗಿರಲಿಲ್ಲ.
ನೆಲಗದರನಹಳ್ಳಿಯ ಮನೆಯನ್ನು ಬಾಡಿಗೆಗಿದ್ದವರು ಖಾಲಿ ಮಾಡಿದ್ದರಿಂದ ಅಲ್ಲಿಗೆ ನಿನ್ನೆ ಸಂಜೆ ಪತ್ನಿ ಮಗುವಿನೊಂದಿಗೆ ಬಂದಿದ್ದ ಗಂಗಾಧರ ಅಲ್ಲೇ ಉಳಿದುಕೊಂಡಿದ್ದ. ರಾತ್ರಿ 11ರ ವೇಳೆ ಸಹೋದರರು ಮೊಬೈಲ್ ಕರೆ ಮಾಡಿದ್ದರೂ ಆತ ಸ್ವೀಕರಿಸಿರಲಿಲ್ಲ.
ಬೆಳಿಗ್ಗೆ ನಿದ್ರೆಯಿಂದ ಎದ್ದ ಮಗು ಬಾಗಿಲು ತೆಗೆದುಕೊಂಡು ಹೊರಬಂದಿದ್ದು, ನೆರೆಯವರು ಬಂದು ನೋಡಿದಾಗ ಇಬ್ಬರು ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ.
ಸ್ಥಳಕ್ಕೆ ಪೀಣ್ಯ ಪೊಲೀಸ್ ಇನ್ಸ್‌ಪೆಕ್ಟರ್ ಐಯ್ಯಣ್ಣರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸುರೇಶ್ ತಿಳಿಸಿದ್ದಾರೆ.

Comments are closed.