ರಾಷ್ಟ್ರೀಯ

ರಾಜಸ್ಥಾನದಲ್ಲಿ ‘ಮಿಗ್‌ 21’ ಯುದ್ಧ ವಿಮಾನ ಪತನ

Pinterest LinkedIn Tumblr

patahananaಜೈಪುರ: ಭಾರತೀಯ ವಾಯುಪಡೆಗೆ ಸೇರಿದ ‘ಮಿಗ್‌ 21’ ಯುದ್ಧ ವಿಮಾನ ರಾಜಸ್ಥಾನದ ಬಾರ್ಮರ್‌ ಜಿಲ್ಲೆಯಲ್ಲಿ ಶನಿವಾರ ಪತನಗೊಂಡಿದೆ.

‘ಬಾರ್ಮರ್‌ನ ಉತ್ತರ್‌ಲಾಯಿ ವಾಯುನೆಲೆಯ ಸಮೀಪದ ಹೊಲದಲ್ಲಿ ವಿಮಾನ ಪತನಗೊಂಡಿದೆ. ಸಾವುನೋವಿನ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ’ ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.

‘ವಿಮಾನ ಪತನದಿಂದ ಆಸ್ತಿಪಾಸ್ತಿ ಹಾನಿಯಾಗಿಲ್ಲ. ಪತನಕ್ಕೂ ಮೊದಲೆ ಪೈಲಟ್‌ ವಿಮಾನದಿಂದ ಹೊರ ಜಿಗಿದಿದ್ದಾರೆ ಎಂಬ ಮಾಹಿತಿ ಇದೆ’ ಎಂದು ಬಾರ್ಮರ್‌ ಜಿಲ್ಲೆಯ ಎಸ್‌ಪಿ ಗಗನ್‌ದೀಪ್‌ ಸಿಂಗ್‌ ಹೇಳಿದ್ದಾರೆ.

Comments are closed.