ಕರ್ನಾಟಕ

ಫಾದರ್‌ ಸಾವಿನಲ್ಲೂ ಸಚಿವಜಾರ್ಜ್‌ ಪಾತ್ರ: ಪ್ರತಿಭಟನೆ

Pinterest LinkedIn Tumblr

k.j.ಬೆಂಗಳೂರು: ಡಿವೈಎಸ್‌ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಗೃಹ ಸಚಿವ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಅವರ ಹೆಸರು ಕೇಳಿ ಬಂದಿರುವ ಬೆನ್ನಲ್ಲೇ, ನಾವೇ (ನಾಗರೀಕ ವೇದಿಕೆ) ಹಾಗೂ ಅಖೀಲ ಕರ್ನಾಟಕ ಕ್ಯಾಥೋಲಿಕ್‌ ಕ್ರೈಸ್ತ ಕನ್ನಡ ಸಂಘದ ಕಾರ್ಯಕರ್ತರು, ಫಾದರ್‌ ಗಳಾಗಿದ್ದ ಚಸರ ಜೋಸೆಫ್ ಅವರ ಸಾವಿನಲ್ಲೂ ಜಾರ್ಜ್‌ ಪಾತ್ರವಿದೆ ಎಂದು ಆರೋಪಿಸಿ ಭಾನುವಾರ ಪ್ರತಿಭಟನೆ ನಡೆಸಿದರು.

ಟೌನ್‌ಹಾಲ… ಮುಂಭಾಗ ಪ್ರತಿಭಟನೆ ಎರಡೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೆ.ಜೆ. ಜಾರ್ಜ್‌ ಅವರು ಗೃಹ ಸಚಿವರಾಗಿದ್ದ ವೇಳೆ ಫಾದರ್‌ ಗಳಾದ ಚಸರಾ ಹಾಗೂ ಜೋಸೆಫ್ ಅವರು ಸಾವನ್ನಪ್ಪಿದ್ದರು. ಇದಕ್ಕೆ ಜಾರ್ಜ್‌ ಅವರೂ ಸಹ ಕಾರಣ ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ. ಡಿವೈಎಸ್‌ಪಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಚಿವ ಜಾರ್ಜ್‌ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗಳ ಹೆಸರು ಪ್ರಸ್ತಾಪಿಸಿ¨ªಾರೆ. ಹಾಗೆಯೇ ಫಾದರ್‌ಗಳ ಸಾವಿನ ಹಿನ್ನೆಲೆಯಲ್ಲಿ ಡಿಸಿಪಿ ವಿಕ್ಟರ್‌ ಡಿಸೋಜಾ ಹಾಗೂ ಪ್ರಣಬ್‌ ಮೊಹಾಂತಿ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿ¨ªಾರೆ.

ರೆಕ್ಟರ್‌ ಕೆ.ಜೆ. ಥಾಮಸ್‌ ಕೊಲೆ ಪ್ರಕರಣದಲ್ಲಿ ಅಮಾಯಕರ ಮೇಲೆ ಸುಳ್ಳು ಆರೋಪ ಹೊರಿಸುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿ¨ªಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕ್ರೈಸ್ತರ ಕನ್ನಡ ಸಂಘದ ಪ್ರಧಾನ
ಕಾರ್ಯದರ್ಶಿ ರಫಾಯಲ… ರಾಜ್‌ ಹಾಗೂ ವೇದಿಕೆಯ ಅಧ್ಯಕ್ಷ ಪಾರ್ವತೀಶ, ಕೆ.ಜೆ. ಥಾಮಸ್‌ ಕೊಲೆ ಪ್ರಕರಣದಲ್ಲಿ ಆರ್ಚ್‌ ಬಿಷಪ್‌ ಬರ್ನಾಡ್‌ ಮೊರಾಸ್‌ ಅವರನ್ನು ಸಂಪ್ರೀತಗೊಳಿಸಲು ಸಚಿವ ಜಾರ್ಜ್‌ ಹಾಗೂ ಪೊಲೀಸ್‌ ಅಧಿಕಾರಿಗಳು ನಿರಪರಾಧಿಗಳನ್ನು ಜೈಲಿಗೆ ತಳ್ಳಿದ್ದಾರೆ ಎಂದು ಆರೋಪಿಸಿದರು.

ಸಚಿವ ಜಾರ್ಜ್‌ ಹಾಗೂ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕೂಡಲೇ ಥಾಮಸ್‌ ಕೊಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ರಾಜ್ಯಪಾಲರಿಗೆ ಮನವಿ ಸಲ್ಲಿಸುವುದಾಗಿಯೂ ಹೇಳಿದರು.
-ಉದಯವಾಣಿ

Comments are closed.