ಕರ್ನಾಟಕ

ಬಿಎಂಟಿಸಿ ಆ್ಯಪ್‌ ಇನ್ನು ಮುಂದೆ ಕನ್ನಡದಲ್ಲೂ ಲಭ್ಯ

Pinterest LinkedIn Tumblr

bmtcಬೆಂಗಳೂರು: ನಗರದಲ್ಲಿ ಯಾವ ಬಸ್‌ ಎಷ್ಟೊತ್ತಿಗೆ ಬರಲಿದೆ? ಒಂದು ಮೂಲೆಯಿಂದ ಮತ್ತೂಂದು ಮೂಲೆಗೆ ತೆರಳಲು ಯಾವ ಬಸ್‌ ಏರಬಹುದು?
ಎಷ್ಟು ಅವಧಿಯಲ್ಲಿ ನಿಗದಿತ ದೂರ ತಲುಪಬಹುದು? ಈ ಎಲ್ಲ ಮಾಹಿತಿಗಳು ಈಗ ನಿಮ್ಮ ಮೊಬೈಲ್‌ನಲ್ಲಿ ಕನ್ನಡದಲ್ಲೇ ಲಭ್ಯವಾಗಲಿವೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕನ್ನಡದ ಮೊಬೈಲ್‌ ಆ್ಯಪ್‌ನ್ನು ಪರಿಚಯಿಸಿದೆ. ಇದರಲ್ಲಿ ಬಸ್‌ಗಳ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ ದೊರೆಯಲಿದೆ. ಈಗಾಗಲೇ 30 ಸಾವಿರ ಮಂದಿ ಆ್ಯಪ್‌ ಅನ್ನು ಡೌನ್‌ ಲೋಡ್‌ ಮಾಡಿಕೊಂಡು ಬಳಸುತ್ತಿದ್ದಾರೆ. ಮೇ 25
ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಂಗ್ಲ ಭಾಷೆ ಯಲ್ಲಿ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದ್ದರು.
-ಉದಯವಾಣಿ

Comments are closed.