ಅಂತರಾಷ್ಟ್ರೀಯ

ವಿಮಾನ ಪ್ರಯಾಣ ಅಂದ್ರೆ ಬ್ರಿಟಿಷರಿಗೆ ಭಯಂಕರ ಹೆದ್ರಿಕೆ!

Pinterest LinkedIn Tumblr

Sameekhe-july-10ವಿಮಾನದಲ್ಲಿ ಒಂದ್ಸಲ ಕೂರ್ಬೇಕು ಅನ್ನೋದು ಹಲವರ ಕನಸು! ಮತ್ತೆ ಕೆಲವರಿಗೆ ವಿಮಾನ ಮೇಲಕ್ಕೆ ಹಾರುತ್ತಿದ್ದಂತೆ ಸ್ವಲ್ಪ… ಹೆದ್ರಿಕೆ.. ಒಳಗೊಳಗೇ ನಡುಕ.. ಇಳಿವಾಗಲೂ ಅಷ್ಟೇ.. ಅಬ್ಬ ಬಚಾವ್‌ ಅಂತ ನಿಟ್ಟುಸಿರು! ಇನ್ನು

ಬ್ರಿಟಿಷರಿಗಂತೂ ವಿಮಾನ ಅಂದ್ರೆ ಭಾರೀ ಹೆದ್ರಿಕೆ ಅಂತ ಸಮೀಕ್ಷೆಯೊಂದು ಹೇಳಿದೆ. ಯುರೋಪ್‌ನಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಶೇ.28ರಷ್ಟು ಮಂದಿ ಬ್ರಿಟಿಷರು ವಿಮಾನ ಅಂದ್ರೆ.. ಯಪ್ಪಾ.. ಬೇಡಪ್ಪಾ.. ಸಹವಾಸ ಅಂದಿದ್ದಾರಂತೆ. ಹಾಗೆಯೇ ಜರ್ಮನಿಯ ಶೇ.18ರಷ್ಟು ಮಂದಿ ಹೆದ್ರಿಕೆ ಇದೆ ಅಂದಿದ್ದರೆ, ಪೋರ್ಚುಗಲ್‌ನ ಶೇ.20ರಷ್ಟು ಮಂದಿ, ಸ್ಪೇನ್‌ನ ಶೇ.21ರಷ್ಟು ಮಂದಿ ವಿಮಾನ ಪ್ರಯಾಣದಲ್ಲಿ ಹೆದ್ರಿಕೆ ಆಗುತ್ತೆ ಎಂದು ಹೇಳಿದ್ದಾರೆ. ಯುರೋಪಿಯನ್‌ನ ಪ್ರಯಾಣ ಹವ್ಯಾಸಗಳ ಬಗ್ಗೆ ತಿಳಿದುಕೊಳ್ಳಲು ಈ ಸಮೀಕ್ಷೆ ನಡೆಸಲಾಗಿದ್ದು, 4 ಸಾವಿರ ಮಂದಿಯನ್ನು ಸಂದರ್ಶಿಸಲಾಗಿತ್ತು. ಅಂದಹಾಗೆ ಬ್ರಿಟಿಷರು ಹೆದರಲು ಕಾರಣ ಇತ್ತೀಚಿನ ಕೆಲವು ವಿಮಾನ ಅಪಘಾತಗಳಂತೆ. ಆದ್ರಿಂದ ವಿಮಾನ ಸಹವಾಸ ಬೇಡ ಅಂತ ಹೇಳಿದ್ದಾರೆ. ಆದರೆ ಹೆದ್ರಿಕೆ ಎಲ್ಲರಲ್ಲೂ ಇದೆ. ಆದ್ರೆ ಬ್ರಿಟಿಷರು ಸಮೀಕ್ಷೆ ವೇಳೆ ಹೆಚ್ಚು ಸತ್ಯವನ್ನೇ ಹೇಳಿದ್ದಾರೆ ಅಂತ ಮಾನಸಿಕ ತಜ್ಞರು
ಹೇಳಿದ್ದಾರೆ.

ಫ‌ಲಿತಗಳು…
ಇತ್ತೀಚಿನ ವಿಮಾನ ಅಪಘಾತ ಪ್ರಕರಣಗಳಿಂದಾಗಿ ವಿಮಾನ ಪ್ರಯಾಣ ಅಂದ್ರೆ ಬ್ರಿಟಿಷರಿಗೆ ಹೆದರಿಕೆ

ಯುರೋಪ್‌ನ ವಿವಿಧ ರಾಷ್ಟ್ರಗಳಲ್ಲಿ ವಿಮಾನ ಪ್ರಯಾಣದ ಬಗ್ಗೆ ಸಾಮಾನ್ಯ ಹೆದರಿಕೆ ಇದ್ದೇ ಇದೆ

ಹೆದ್ರಿಕೆ ಎಲ್ಲರಲ್ಲೂ ಇದೆ, ಆದ್ರೆ ಸಮೀಕ್ಷೆ ವೇಳೆ ಬ್ರಿಟಿಷರು ಹೆಚ್ಚು ಸತ್ಯವನ್ನೇ ಹೇಳಿದ್ದಾರೆ: ಮಾನಸಿಕ ತಜ್ಞರ ಅಭಿಪ್ರಾಯ
-ಉದಯವಾಣಿ

Comments are closed.