ಅಂತರಾಷ್ಟ್ರೀಯ

ಪೆಟ್ಟಿಗೆಯಲ್ಲಿ ಬಚ್ಚಿಟ್ಟ ಲವ್ವರ್ ಪ್ರಾಣಾನೇ ಹೋಯ್ತು!

Pinterest LinkedIn Tumblr

Deadಅವರಿಗಿಬ್ಬರಿಗೂ ಗುಪ್ತ್ ಗುಪ್ತ್ ಸಂಬಂಧ! ಅವನು ರಾತ್ರಿ ಬರೋದು, ಬೆಳಗ್ಗೆ ಎಸ್ಕೇಪ್‌ ಆಗೋದು ನಡೆದೇ ಇತ್ತು. ಆದರೆ ಅದೇನೋ ದಡ ಬಡ ಸದ್ದು… ಅಂತ ಮನೆಯವರು ಎದ್ದು ನೋಡುವ ಹೊತ್ತಲ್ಲಿ ಆಕೆ ಆತನನ್ನು ದೊಡ್ಡ ಪೆಟ್ಟಿಗೆಯಲ್ಲಿ ಕೂಡಿ ಹಾಕಿ ಲಾಕ್‌ ಮಾಡಿದ್ದಳು. ಮನೆಯವರೆಲ್ಲ ಒಂದು ರೌಂಡ್‌ ಬಂದು ನೋಡೋ ಹೊತ್ತಿಗೆ, ಅಯ್ಯೋ ಪೆಟ್ಟಿಗೆ ತೆರೀರಿ ಅಂದ್ರೂ ಯಾರೂ ತೆರೀಲಿಲ್ಲ.

ಬಳಿಕ ಪೆಟ್ಟಿಗೆ ತೆರೆಯುವಷ್ಟರ ಹೊತ್ತಿಗೆ ಆತ ಹೆಣವಾಗಿ ಹೋಗಿದ್ದ..! ಇದು ನಡೆದಿದ್ದು, ದೂರದ ಪಾಕಿಸ್ತಾನದಲ್ಲಿ. ಎರಡು ಮಕ್ಕಳ ಅಪ್ಪ ಮುಷ್ತಾಕ್‌ ಅಹಮದ್‌ ಬಲೂಚ್‌ (22) ಮತ್ತು ಆತನ ಸೋದರ ಸಂಬಂಧಿ ರಾಣಿ ಬೀಬಿ ಎಂಬವಳಿಗೂ ಲವ್ವು! ರಾಣಿ ಮನೆಗೆ ಬಂದು ಎಡವಟ್ಟಾಗಿ ಪೆಟ್ಟಿಗೇಲಿ ಕೂತು ಬೊಬ್ಬೆ ಹೊಡೆದ್ರೂ ಆಕೆಯ ಮಾವ, ಮೈದುನ ಪೆಟ್ಟಿಗೆ ತೆರೀಲಿಲ್ಲ ಎನ್ನಲಾಗಿದೆ. ಇದೀಗ ಇಬ್ಬರ ವಿರುದ್ಧ ಕೇಸು ದಾಖಲಾಗಿದೆ. ರಾಣಿ ಗಂಡ ದೂರದ ಪ್ರದೇಶದಲ್ಲಿ ಕೆಲ್ಸ ಮಾಡ್ತಿದ್ರಿಂದ ಈ  ಪ್ರೇಮವ್ಯವಹಾರ ಜೋರಾಗಿತ್ತಂತೆ!
-ಉದಯವಾಣಿ

Comments are closed.