ಕರ್ನಾಟಕ

ರಂಜಾನ್ ಪ್ರಯುಕ್ತ ಈದ್ಗಾಗಳಿಗೆ ಬಿಗಿ ಬಂದೋಬಸ್ತ್

Pinterest LinkedIn Tumblr

security

ಮುಜಾಫರ್’ನಗರ ಜು.5: ರಂಜಾನ್ ಆಚರಣೆಯ ಹಿನ್ನೆಲೆಯಲ್ಲಿ ಮುಜಾಫರ್’ನಗರದಾದ್ಯಂತ ಇರುವ 127 ಈದ್ಗಾಗಳಿಗೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಈದ್ ಆಚರಣೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ 127 ಈದ್ಗಾಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿ ಡಿ.ಕೆ. ಸಿಂಗ್ ಹೇಳಿದ್ದಾರೆ.

ಈದ್-ಉಲ್-ಫಿತರ್ ಹಿನ್ನೆಲೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಈದ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.

Comments are closed.