ಚಿಕ್ಕಮಗಳೂರು: ಇದು ಬೇಲಿಯೇ ಎದ್ದು ಹೊಲ ಮೇಯ್ದ ಹಾಗಾಯ್ತು! 10 ಲಕ್ಷ ರೂಪಾಯಿ ಹಣಕ್ಕಾಗಿ ರೌಡಿಗಳನ್ನು ಬಿಟ್ಟು ಡಿವೈಎಸ್ಪಿಯೇ ವ್ಯಕ್ತಿಯೊಬ್ಬರನ್ನು ಕಿಡ್ನಾಪ್ ಮಾಡಿಸಿರುವ ಘಟನೆ ಚಿಕ್ಕಮಗಳೂರಿನ ಬಸವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು ಚಿಕ್ಕಮಗಳೂರಿನ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಹಣಕ್ಕಾಗಿ ತೇಜಸ್ ಎಂಬ ಯುವಕನನ್ನು ಕಿಡ್ನಾಪ್ ಮಾಡಿಸಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ಕುರಿತಂತೆ ಹಂಡಿಬಾಗ್ ಅವರನ್ನು ಅಮಾನತು ಮಾಡಿ ತನಿಖೆ ನಡೆಸುವಂತೆ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಆದೇಶ ನೀಡಿದ್ದಾರೆ.
ಏನಿದು ಘಟನೆ:
ಚಿಕ್ಕಮಗಳೂರಿನ ಹೋಮ್ ಸ್ಟೇವೊಂದರಲ್ಲಿ ತೇಜಸ್ ಗೌಡ ಹಾಗೂ ಸ್ನೇಹಿತರು ಇಸ್ಪೀಟ್ ಆಡುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಪ್ರಕರಣದಲ್ಲಿ ತೇಜಸ್ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ. ಜೈಲಿನಿಂದ ಹೊರಬಂದ ನಂತರ ಜೂನ್ 27ರಂದು ತೇಜಸ್ ನನ್ನು ದುಷ್ಕರ್ಮಿಗಳು ಅಪಹರಿಸಿದ್ದರು.
ಬಳಿಕ ಡಿವೈಎಸ್ಪಿ ಕಲ್ಲಪ್ಪ 10 ಲಕ್ಷ ರೂಪಾಯಿ ಹಣ ತಲುಪಿಸುವಂತೆ ದೂರವಾಣಿ ಮೂಲಕ ಸೂಚಿಸಿದ್ದ. ಅದರಂತೆ ತೇಜಸ್ ಸ್ನೇಹಿತ ಪವನ್ 10 ಲಕ್ಷ ರೂಪಾಯಿ ಹಣವನ್ನು ತಲುಪಿಸಿದ್ದ. ಹಣ ನೀಡಿದ ನಂತರ ತೇಜಸ್, ಹಂಡಿಬಾಗ್ ವಿರುದ್ಧ ಎಸ್ಪಿ ಅವರಿಗೆ ದೂರು ನೀಡಿದ್ದ. ಅದರಂತೆ ತನಿಖೆ ನಡೆಸಿದಾಗ ಈ ವಿಷಯ ಬಯಲಾಗಿದೆ.
-ಉದಯವಾಣಿ
Comments are closed.