ಕರಾವಳಿ

ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಸರ್ಜರಿ : ದಕ್ಷ ಅಧಿಕಾರಿ ಎಸಿಪಿ ತಿಲಕ್‌ಚಂದ್ರ ಸೇರಿದಂತೆ ಹಲವು ಅಧಿಕಾರಿಗಳ ವರ್ಗಾವಣೆ

Pinterest LinkedIn Tumblr

Thilak_Trasefar

ಮಂಗಳೂರು, ಜು.04: ಪೊಲೀಸ್ ಇಲಾಖೆಯಲ್ಲಿ ಬಹಳ ದಿನಗಳ ನಂತರ ಬಹಳ ದೊಡ್ಡ ಮಟ್ಟದ ವರ್ಗಾವಣೆ ಪ್ರಕ್ರಿಯೆ ನಡೆದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳನ್ನು ವಿವಿಧ ಠಾಣೆಗಳಿಗೆ ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.

ರೌಡಿಗಳಿಗೆ – ಅಪರಾಧಿಗಳಿಗೆ ಸಿಂಹಸ್ವಪ್ನರಾಗಿದ್ದ ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಯೆಂದೇ ಗುರುತಿಸಿಕೊಂಡಿದ್ದ ಮಂಗಳೂರು ಕೇಂದ್ರ ವಿಭಾಗದ ಎಸಿಪಿ ತಿಲಕ್‌ಚಂದ್ರ (ಮಾಹಿತಿ ಹಕ್ಕು ಕಾರ್ಯಕರ್ತ ಬಾಳಿಗ ಮರ್ಡರ್ ಕೇಸ್‌ನ ತನಿಖಾಧಿಕಾರಿಯಾಗಿದ್ದ ) ಅವರನ್ನು ಸಂಚಾರ ಉಪವಿಭಾಗಕ್ಕೆ, ಸಂಚಾರ ಉಪವಿಭಾಗದಲ್ಲಿದ್ದ ಎಸಿಪಿ ಉದಯ್ ನಾಯಕ್ ಅವರನ್ನು ನಗರ ಕೇಂದ್ರ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಸಿಐಡಿ ಎಸಿಪಿ ಆಗಿದ್ದ ಡಿ.ಎಸ್.ರಾಜೇಂದ್ರ ಅವರನ್ನು ಮಂಗಳೂರು ಉತ್ತರ ಉಪವಿಭಾಗಕ್ಕೆ ಹಾಗೂ ಶಿಕಾರಿಪುರ ಉಪವಿಭಾಗದ ಎಸಿಪಿ ಶ್ರುತಿ ಅವರನ್ನು ಮಂಗಳೂರು ದಕ್ಷಿಣ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಮಂಗಳೂರು ಸಿಸಿಬಿ ಠಾಣಾಧಿಕಾರಿ ಆಗಿದ್ದ ವೈಲೆಂಟೈನ್ ಡಿಸೋಜ ಅವರನ್ನು ವರ್ಗಾಯಿಸಲಾಗಿದ್ದು, ಆದರೆ ಅವರನ್ನು ಎಲ್ಲಿಗೆ ನಿಯುಕ್ತಿಗೊಳಿಸಲಾಗಿದೆ ಎಂಬುವುದು ಇನ್ನೂ ದೃಡಪಟ್ಟಿಲ್ಲ. ಅವರ ಸ್ಥಾನಕ್ಕೆ ಕಾಪು ಠಾಣಾಧಿಕಾರಿ ಸುನೀಲ್ ವೈ. ನಾಯಕ್ ಅವರನ್ನು ನೇಮಕಗೊಳಿಸಲಾಗಿದೆ. ಇನ್ನುಳಿದಂತೆ ಬೆಳ್ಳಿಯಪ್ಪ ಅವರನ್ನು ಬಂಟ್ವಾಳದಿಂದ ಪಾಂಡೇಶ್ವರ ಠಾಣೆಗೆ, ರಾಘವ ಪಡೀಲ್ ಅವರನ್ನು ಕೊಣಾಜೆ ಠಾಣೆಯಿಂದ ಬೈಂದೂರು ವೃತ್ತ, ಪ್ರವೀಣ್ ಎಚ್.ನಾಯಕ್ ಅವರನ್ನು ಬಂಟ್ವಾಳ ಉಪವಿಭಾಗದಿಂದ ಕುಂದಾಪುರ ಉಪವಿಭಾಗಕ್ಕೆ, ರವೀಶ್ ಅವರನ್ನು ಆಂತರಿಕ ಭದ್ರತಾ ವಿಭಾಗದಿಂದ ಬಂಟ್ವಾಳ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.ಕುಂದಾಪುರದಲ್ಲಿ ಡಿವೈಎಸ್ಪಿಯಾಗಿದ್ದ ಮಂಜುನಾಥ್ ಶೆಟ್ಟಿಯವರನ್ನು ವರ್ಗಾವಣೆ ಮಾಡಲಾಗಿದೆ.

Police_Transfer_1 Police_Transfer_2 Police_Transfer_3 Police_Transfer_4 Police_Transfer_5 Police_Transfer_6

ಮೂಡಬಿದ್ರೆ ಠಾಣಾಧಿಕಾರಿ ಆಗಿದ್ದ ಅನಂತ ಪದ್ಮನಾಭ ಅವರನ್ನು ಮೂಡಬಿದ್ರೆಯಿಂದ ಮೂಲ್ಕಿಗೆ, ರಾಮಚಂದ್ರ ನಾಯಕ್ ಅವರನ್ನು ಮೂಲ್ಕಿಯಿಂದ ಮೂಡಬಿದ್ರೆಗೆ, ಅರುಣ್ ಬೊಮ್ಮಯ್ಯ ಅವರನ್ನು ಬ್ರಹ್ಮಾವರದಿಂದ ಮಂಗಳೂರು ಮೆಸ್ಕಾಂ, ಜಯಶಂಕರ್ ಟಿ.ಆರ್. ಉಡುಪಿ ಡಿಸಿಐಬಿಯಿಂದ ಉಡುಪಿ ನಗರ ವೃತ್ತಕ್ಕೆ ವರ್ಗಾವಣೆಗೊಳಿಸಿ ಆದೇಶ ನೀಡಲಾಗಿದೆ. ಈ ಅಧಿಕಾರಿಗಳಲ್ಲದೇ ಇನ್ನೂ ಹಲವಾರು ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.

Comments are closed.