ಬ್ಯಾಡ್ ಬಾಯ್ ಪಟ್ಟದಿಂದ ಕಳಚಿಕೊಳ್ಳಲು ಸಲ್ಮಾನ್ಖಾನ್ ಆಗಾಗ್ಗೆ ಒಳ್ಳೇ ಕೆಲ್ಸ ಮಾಡ್ತಲೇ ಇರ್ತಾರೆ. ‘ಬೀಯಿಂಗ್ ಹ್ಯುಮನ್’ ಸಂಸ್ಥೆ ಮೂಲಕ ಮತ್ತೆ ಅವರು ಹೃದಯ ವೈಶಾಲ್ಯ ಮೆರೆದಿದ್ದಾರೆ. ‘ಭಾರತದ ಏಲಿಯನ್ ಮಗಳು’ ಎಂಬ ಕುಖ್ಯಾತಿಯ ಮಗುವಿಗೆ ಹೊಸರೂಪ ಕೊಡಲು ಮುಂದಾಗಿದ್ದಾರೆ.
ಸಲ್ಲು ಅಭಿಮಾನಿ ಆಗಿರುವ ಶೈಲಿ ಎಂಬ ಏಳು ವರ್ಷದ ಹುಡುಗಿಗೆ ಕ್ರೌಝಾನ್ ಸಿಂಡ್ರೋಮ್ ಇದೆ. ಅಂದರೆ, ಕಣ್ಣುಗುಡ್ಡೆಗಳು ಮುಖದಿಂದ ಹೊರಗಿಣುಕಿದಂತೆ ಕಾಣುವ ಆಕೃತಿ. ಶೈಲಿ ಮನೆಯಿಂದ ಹೊರಗೆ ಹೋಗುವುದೇ ಇಲ್ವಂತೆ. ತನ್ನ ಕರೂಪಿತನವನ್ನು ಯಾರಾದರೂ ಆಡಿಕೊಂಡರೆ ಎಂಬ ಭಯ ಆಕೆಗೆ.
ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಜುಲೈ 13ಕ್ಕೆ ಶೈಲಿಯ ಕಣ್ಣುಗುಡ್ಡೆಗಳ ಆಪರೇಶನ್ ನಡೆಯಲಿದ್ದು, ಅದರ ಸಂಪೂರ್ಣ ವೆಚ್ಚವನ್ನು ಸಲ್ಮಾನ್ ಹೊರಲಿದ್ದಾರೆ. ಬದಲೀ ಕಣ್ಣುಗಳು ಜೋಡಣೆಗೆ ಸಹಕರಿಸುತ್ತಿದ್ದಾರೆ. ಸಲ್ಮಾನ್ ಖುದ್ದಾಗಿ ಶೈಲಿಯನ್ನು ಭೇಟಿ ಆಗಿ, ಸಾಂತ್ವನ ಹೇಳಿದ್ದಾರೆ

Comments are closed.