ಕರ್ನಾಟಕ

ಬಾಲಿಪುಡ್ ನಟ ತುಷಾರ್ ಕಪೂರ್ ಮದ್ವೆ ಅಗದೇ ಸಿಂಗಲ್ ಫಾದರ್ ಅದ ಕತೆ

Pinterest LinkedIn Tumblr

tusara_kapoor_baby

ಕಾಮಿಡಿ ಸಿನಿಮಾ ಖ್ಯಾತಿಯ ನಟ ತುಷಾರ್ ಕಪೂರ್ ಮದ್ವೆ ಆಗದೆ ಅಪ್ಪನಾಗಿದ್ದಾರೆ! ಅವರೀಗ ‘ಲಕ್ಷ್ಯಾ’ ಎಂಬ ಹೆಣ್ಮಗುವಿನ ತಂದೆ! ಹೌದು, ಹೆಸರಾಂತ ನಟ ಜೀತೇಂದ್ರ ಅವರ ಪುತ್ರ ತುಷಾರ್ ಕಪೂರ್ ಸಿಂಗಲ್ ಫಾದರ್ ಆಗಿದ್ದಾರೆ. ಐವಿಎಫ್ ಮೂಲಕ ಮಗುವನ್ನು ಪಡೆದು, ‘ಲಕ್ಷ್ಯಾ’ ಎಂಬ ಹೆಸರಿಟ್ಟು ಗ್ರ್ಯಾಂಡ್ ಆಗಿ ನಾಮಕರಣವನ್ನೂ ಮುಗಿಸಿದ್ದಾರೆ.

tusara_kapoor_tweet

‘ದೇವರು ದೊಡ್ಡವನು. ಜಸ್ಲಾಕ್ ಆಸ್ಪತ್ರೆಯ ವೈದ್ಯರ ತಂಡ ಅದ್ಭುತ ಶ್ರಮ ಹಾಕಿದೆ. ಲಕ್ಷ್ಯಾ ಜೊತೆಗೆ ಇನ್ನೊಂದು ಹೊಸ ಬದುಕನ್ನು ಆರಂಭಿಸುತ್ತಿದ್ದೇನೆ’ ಎಂದಿದ್ದಾರೆ ತುಷಾರ್. ಬ್ರಹ್ಮಚಾರಿ ಮಗನ ಈ ನಿರ್ಧಾರಕ್ಕೆ ಅಪ್ಪ ಜೀತೇಂದ್ರ ಯಾವುದೇ ಬೇಸರವನ್ನು ಸೂಚಿಸಿಲ್ಲ. ‘ಇದು ಸಂಪೂರ್ಣ ತುಷಾರ್ ನಿರ್ಧಾರ. ಅವನೇನೇ ಬಯಸಿದರೂ ಅದನ್ನು ಬೆಂಬಲಿಸುತ್ತೇವೆ. ಅವನು ಸ್ವಾತಂತ್ರ್ಯ ಬಯಸುವವನು. ಲಕ್ಷ್ಯಾಗೆ ಖಂಡಿತಾ ಅತ್ಯುತ್ತಮ ತಂದೆ ಆಗುತ್ತಾನೆ’ ಎಂದಿದ್ದಾರೆ.

Comments are closed.