
ವರದಿ : ಈಶ್ವರ ಎಂ. ಐಲ್/ ಚಿತ್ರ : ದಿನೇಶ್ ಕುಲಾಲ್
ಮುಂಬಯಿ : ಬಿಜಾಪುರದ ಹಿರಿಯ ಸಾಹಿತಿ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರಿಗೆ ಈ ಬಾರಿಯ ಡಾ. ಸುನೀತಾ ಶೆಟ್ಟಿ ಪ್ರಶಸ್ತಿ ಯನ್ನು ಜೂ. 25 ರಂದು ಕರ್ನಾಟಕ ಸಂಘದ ಸಮರಸ ಭವನದಲ್ಲಿ ಪ್ರಧಾನಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು ತಾಯಿ ಮನೆಯಲ್ಲಿ ಕರೆದು ನೀಡಿದ ಪ್ರಶಸ್ತಿ ಇದಾಗಿದ್ದು ಬಹಳ ಸಂತೋಷದಿಂದ ಸ್ವೀಕರಿಸುತ್ತಿದ್ದೇನೆ ಎಂದರು. ಪ್ರಶಸ್ತಿಯ ಪ್ರಾಯೋಜಕರಾದ ಡಾ. ಸುನೀತಾ ಶೆಟ್ಟಿ ಯವರು ಇದೀಗ ಏಳು ವರ್ಷಗಳಿಂದ ಸಂಘವು ಸಾಹಿತ್ಯ ಲೋಕದ ಸಮರ್ಥರಿಗೆ ಈ ಪ್ರಶಸ್ತಿಯನ್ನು ನೀಡುತ್ತಿರುವುದು ಸಂತೋಷದ ಸಂಗತಿ ಎಂದರು.
ಡಾ.ಎಸ್. ಕೆ. ಭವಾನಿಯವರು ಅಧ್ಯಕ್ಷತೆಯನ್ನು ವಹಿಸಿದ್ದು, ಡಾ. ಭರತ್ ಕುಮಾರ್ ಪೊಲಿಪು, ಓಂದಾಸ್ ಕನ್ನಂಗಾರ್ ಮೊದಲಾದವರು ಉಪಸ್ಥಿತರಿದ್ದರು.
Comments are closed.