ಚಿಕ್ಕಮಗಳೂರು ಜೂ.28: ಪಶ್ಚಿಮಘಟ್ಟ ಸಾಲಿನ ರಸ್ತೆಗಳದ್ದು ಹಾವು ಬಳುಕಿನ ಮೈಕಟ್ಟು. ಚಿಕ್ಕಮಗಳೂರಿನ ವಿವಿಧ ಸ್ಥಳಗಳಿಗೆ ಪ್ರವಾಸಿಗ್ರು ದಿನಾಲೂ ಬರುತ್ತಾರೆ. ಆದರೆ ಸರಿಯಾದ ರಸ್ತೆ ಮಾರ್ಗಗಳಿಲ್ಲ. ಕಿರಿದಾದ ರಸ್ತೆಗಳು ಪ್ರವಾಸಿಗರಿಗೆ ಅಪಾಯ ತಂದೊಡ್ಡಲಿವೆ. ರಸ್ತೆಗಳಲ್ಲಿ ಮೊಣಕಾಲುದ್ದದ ಗುಂಡಿಗಳು ಬಿದ್ದಿವೆ.
ಹೌದು ಚಿಕ್ಕಮಗಳೂರಿನ ಮುಳ್ಯಯ್ಯನಗಿರಿ ಮತ್ತು ಸೀತಾಳಯ್ಯನ ಗಿರಿಯ ರಸ್ತೆಗಳು ಅತೀ ಕಿರಿದಾಗಿವೆ. ಒಂದು ವಾಹನ ಸಂಚಾರ ದುಸ್ತರವಾಗಿದ್ದು ವಾಹನ ಚಾಲಕರು ಕೊಂಚ ಎಡವಿದರೂ ಅಪಾಯವೇ. ರಸ್ತೆಯುದ್ದಕ್ಕೂ ಮೊಣಕಾಲುದ್ಧದ ಗುಂಡಿಗಳಲ್ಲಿ ಪ್ರವಾಸಿಗರು ಸಾಗುವುದು ಬಲು ಕಷ್ಟ.
ರಸ್ತೆಗಳ ಗುಂಡಿಗಳನ್ನು ಮುಚ್ಚಿ ತಡೆಗೋಡೆಗಳನ್ನು ನಿರ್ಮಿಸಬೇಕು ಎನ್ನುವ ಬೇಡಿಕೆ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಚೆಕ್ ಪೋಸ್ಟ್ ‘ನಲ್ಲಿ ಪ್ರವಾಸಿಗರಿಂದ ಸಾವಿರಾರೂ ರೂಪಾಯಿ ವಸೂಲಿ ಮಾಡಿದರೂ ರಸ್ತೆ ಮಾತ್ರ ಸರಿಯಾಗಿಲ್ಲ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.
ಮಳೆಗಾಲ ಶುರುವಾದ ಕಾರಣ ರಸ್ತೆ ಮತ್ತಷ್ಟು ಹಾಳಾಗಿ ಪ್ರವಾಸಿಗರು ಪಡಿಪಾಟಲು ಬೀಳದಿರಲಿ. ಸಂಭವಿಸಬಹುದಾದ ಆಪತ್ತು ತಪ್ಪಬೇಕಿದೆ. ಈ ದಿಸೇಲಿ ಚಿಕ್ಕಮಗಳೂರು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.



Comments are closed.