ಬಳ್ಳಾರಿ: ಕೂಡ್ಲಿಗಿಯ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ವಿರುದ್ಧ ಬಳ್ಳಾರಿಯ ಎರಡನೇ ಹೆಚ್ಚುವರಿ ಪ್ರಧಾನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಕೂಡ್ಲಿಗಿಯ ಗುಡೇಕೋಟೆ ನಿವಾಸಿ ಮೊಹಮ್ಮದ್ ರಫಿ ಎಂಬುವರು ದೂರು ದಾಖಲಿಸಿದ್ದಾರೆ.
ಶೆಣೈ ಅವರ ಹೆಸರಿನಲ್ಲಿರುವ ಫೇಸ್‌ಬುಕ್ ಖಾತೆ ಯಾರದ್ದು? ಅದರಲ್ಲಿ ಹಾಕಲಾದ ಸ್ಟೇಟಸ್‌ಗಳ ಕುರಿತು ತನಿಖೆ ನಡೆಸಬೇಕು. ಫೇಸ್‌ಬುಕ್ ಅಕೌಂಟ್ ನಲ್ಲಿ ಪ್ರಕಟಗೊಂಡಿರುವ ಸಿ.ಡಿ, ಆಡಿಯೊ ದಾಖಲೆಗಳ ಸತ್ಯಾಸತ್ಯತೆ, ಭವಿಷ್ಯದಲ್ಲಿ ಅವುಗಳ ದುರ್ಬಳಕೆ ಆಗದಂತೆ ತಡೆ ನೀಡಬೇಕು. ಈ ನಿಟ್ಟಿನಲ್ಲಿ ಪೊಲೀಸ್ ತನಿಖೆಯಾಗಬೇಕು ಎಂದು ದೂರು ಸಲ್ಲಿಕೆಯಾಗಿದೆ.
ದೂರು ಸ್ವೀಕರಿಸಿರುವ ನ್ಯಾಯಾಲಯ ಸಂಬಂಧಿಸಿದ ಠಾಣೆಗೆ ತನಿಖೆಗೆ ನಿರ್ದೇಶನ ನೀಡಲಿದೆ.
Comments are closed.