ರಾಷ್ಟ್ರೀಯ

ಸುಬ್ರಮಣಿಯನ್ ಸ್ವಾಮಿಗೆ ಗಮನ ಸೆಳೆಯುವ ಗೀಳು: ವಾದ್ರಾ

Pinterest LinkedIn Tumblr

Robert-Vadraನವದೆಹಲಿ: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರಿಗೆ ಗಮನ ಸೆಳೆಯುವ ಗೀಳು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ಭಾರತೀಯ ಸಚಿವರು ವಿದೇಶಿ ಪೋಷಾಕು ಧರಿಸಿದಾಗ ವೇಟರ್‍ ಗಳಂತೆ ಕಾಣುತ್ತಾರೆ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದರು. ಸ್ವಾಮಿಯವರು ಅರುಣ್ ಜೇಟ್ಲಿ ಅವರನ್ನು ಉದ್ದೇಶಿಸಿಯೇ ಈ ಟ್ವೀಟ್ ಮಾಡಿದ್ದಾರೆ ಎಂದು ಈ ಬಗ್ಗೆ ಟ್ವೀಟ್ ಚರ್ಚೆಗಳೂ ನಡೆದಿದ್ದವು.
ಇತ್ತೀಚೆಗೆ ಅರುಣ್ ಜೇಟ್ಲಿ ಅವರು ಚೀನಾ ಪ್ರವಾಸ ಕೈಗೊಂಡಾಗ ಅಲ್ಲಿನ ಸಾಂಪ್ರದಾಯಿಕ ಉಡುಗೆ ಬದಲು ಕೋಟ್, ಟೈ ಧರಿಸಿದ್ದರು.
BJP should direct our Ministers to wear traditional and modernised Indian clothes while abroad. In coat and tie they look like waiters
— Subramanian Swamy (@Swamy39) June 24, 2016
ಸ್ವಾಮಿ ಅವರ ಈ ಟ್ವೀಟ್‍ಗೆ ಫೇಸ್‍ಬುಕ್‍ನಲ್ಲಿ ಪ್ರತಿಕ್ರಿಯಿಸಿರುವ ವಾದ್ರಾ, ವೇಟರ್ ವೃತ್ತಿಗೆ ಯಾವುದೇ ಘನತೆಯಿಲ್ಲ ಎಂದು ಸ್ವಾಮಿ ಅಂದುಕೊಂಡಿದ್ದಾರೆಯೇ?. ಶ್ರಮ ಜೀವಿಗಳಾದ ವೇಟರ್‍ ಗಳ ಬಗ್ಗೆ ಲಘುವಾಗಿ ಮಾತನಾಡಿ ಗಮನ ಸೆಳೆಯಲು ಸುಬ್ರಮಣಿಯನ್ ಸ್ವಾಮಿ ಯತ್ನಿಸುತ್ತಿದ್ದಾರೆ ಎಂದು ಬರೆದಿದ್ದಾರೆ.
ROBERT VADRA
11 hours ago
So is there no dignity in being a Waiter ?!
The attention seeking BJP MP Swamy’s comment “Ministers who wear a coat and tie “look like waiters” and must be instructed to wear Indian clothes.”
Undermining waiters who work hard for a living; making condescending and derogatory remarks about them is deplorable and classist…

Comments are closed.