ಅಂತರಾಷ್ಟ್ರೀಯ

ಅಮೆರಿಕದಲ್ಲಿ ಪ್ರವಾಹ: 23 ಸಾವು

Pinterest LinkedIn Tumblr

ameವಾಷಿಂಗ್ಟನ್‌(ಎಎಫ್‌ಪಿ): ಅಮೆರಿಕದ ಪಶ್ಚಿಮ ವರ್ಜಿನಿಯಾದಲ್ಲಿ ಚಂಡಮಾರುತ ಅಪ್ಪಳಿಸಿ ಪ್ರವಾಹ ಉಂಟಾಗಿದ್ದು 23 ಜನ ಸಾವಿಗೀಡಾಗಿದ್ದಾರೆ.

ಚಂಡಮಾರುತದ ರಭಸಕ್ಕೆ ಸಿಕ್ಕಿ 23 ಜನ ಸಾವಿಗೀಡಾಗಿದ್ದಾರೆ. ಹಲವರು ಕಾಣೆಯಾಗಿದ್ದು, ಶೋಧಕಾರ್ಯ ನಡೆಯುತ್ತಿದೆ ಎಂದು ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.
ಆರು ಕೌಂಟಿಗಳಲ್ಲಿ 60 ಸಾವಿರ ಜನ ಪ್ರವಾಹ ಸಂಕಷ್ಟ ಎದುರಿಸುತ್ತಿದ್ದಾರೆ. ಅಪಾರ ಪ್ರಮಾಣದ ಹಾನಿಯಾಗಿದ್ದು, ಹಲವೆಡೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ ಮಾಹಿತಿ ನೀಡಿದ್ದಾರೆ.

Comments are closed.