
ಮೈಸೂರು: ಅರಮನೆಯಲ್ಲಿ ಮದುವೆ ಶಾಸ್ತ್ರಗಳು ಆರಂಭವಾಗಿವೆ. ಇವತ್ತಿನಿಂದ ಮದುವೆಗೆ ಸಂಬಂಧಿಸಿದ ಮೊದಲ ದಿನದ ಶಾಸ್ತ್ರಗಳಲ್ಲಿ ಯದುವಂಶದ ಯುವರಾಜ ಯದುವೀರ್ ಭಾಗಿಯಾಗಲಿದ್ದಾರೆ.
ಯದುವೀರ್ ವಿವಾಹ ಮಹೋತ್ಸವ ಹಿನ್ನೆಲೆಯಲ್ಲಿ ಪರಕಾಲ ಮಠದ ಶ್ರೀಗಳಾದ ಶ್ರೀ ಅಭಿನವ ವಾಗೀಶ ಶ್ರೀಗಳು ಮೈಸೂರು ಅರಮನೆಗೆ ಆಗಮಿಸಿದ್ದು, ಮೈಸೂರು ರಾಜಮನೆತನದ ರಾಜಗುರುಗಳಾಗಿರುವ ಪರಕಾಲ ಮಠದ ಶ್ರೀಗಳ ಪಾದಪೂಜೆಯನ್ನ ಯದುವೀರ್ ಹಾಗೂ ರಾಜಮನೆತನದ ಸದಸ್ಯರು ನೆರವೇರಿಸಿದರು.
Comments are closed.