ಕರ್ನಾಟಕ

ಔಷಧಿ ಖರೀದಿ ಅವ್ಯವಹಾರ: ಸಿಎಂ ವಿರುದ್ಧ ಎಸಿಬಿಗೆ ದೂರು

Pinterest LinkedIn Tumblr

poupuoiರಾಯಚೂರು: ಹಟ್ಟಿ ಚಿನ್ನದ ಗಣಿ ಆಸ್ಪತ್ರೆಯಲ್ಲಿ ಆಯರ್ವೇದ ಔಷಧಿ ಖರೀದಿ ಅವ್ಯವಹಾರ ಸಂಬಂಧ ಮುಖ್ಯಮಂತ್ರಿ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ದೂರು ನೀಡಲಾಗಿದೆ.

ಈ ಕುರಿತು ಹನುಮಂತ ಎಂಬುವರು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲು ಹೋಗಿದ್ದರು. ಇದಕ್ಕೆ ಸಿಎಂ ಸರಿಯಾಗಿ ಸ್ಪಂದಿಸದ ಕಾರಣ ಅವರೂ ಈ ಪ್ರಕರಣದಲ್ಲಿ ಬಾಗಿಯಾಗಿದ್ದಾರೆ ಎಂದು ಆರೋಪಿಸಿ ಎಸಿಬಿಗೆ ದೂರು ನೀಡಿದ್ದಾರೆ.
ದೂರು ಅರ್ಜಿ ಸ್ವೀಕರಿಸಲಾಗಿದೆ. ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಎಸಿಬಿ ಪ್ರಭಾರ ಡಿವೈಎಸ್ಪಿ ಚಂದ್ರಶೇಖರ್‌ ನೀಲಗಾರ ತಿಳಿಸಿದ್ದಾರೆ.

Comments are closed.