ಕರ್ನಾಟಕ

ದಕ್ಕದ ಸಚಿವ ಸ್ಥಾನ: ಮುನಿಸಿಕೊಂಡ ಬೆಂಗಳೂರು ಶಾಸಕರು

Pinterest LinkedIn Tumblr

S.T.-SOMASHEKARಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನರ್‍ರಚನೆ ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ತಮಗೆ ಸಚಿವ ಸ್ಥಾನ ನೀಡಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನ ಕೆಲ ಶಾಸಕರು ಮುನಿಸಿಕೊಂಡಿದ್ದಾರೆ.
ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್, ಆರ್ ಕೆ ಪುರಂ ಶಾಸಕ ಭೈರತಿ ಬಸವರಾಜ್, ಆರ್ ವಿ ದೇವರಾಜ್, ಎಂ.ಕೃಷ್ಣಪ್ಪ, ಪ್ರಿಯಾ ಕೃಷ್ಣ, ಮುನಿರತ್ನ ಮೊದಲಾದ ಶಾಸಕರು ಸಿಎಂ ನಿರ್ಧಾರದ ಬಗ್ಗೆ ಅತೃಪ್ತಿ ವ್ಯಕ್ತ ಪಡಿಸಿದ್ದಾರೆ.
ನನಗೆ ಯಾಕೆ ಸಚಿವ ಸ್ಥಾನ ನೀಡಿಲ್ಲ?
ಸಿದ್ದರಾಮಯ್ಯ ಅವರು ಹೊಸಬರಿಗೆ ಸಚಿವ ಸ್ಥಾನ ನೀಡಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿರುವ ಎಸ್.ಟಿ ಸೋಮಶೇಖರ್ ಅವರು, ಹೊಸದಾಗಿ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡಿದ್ದು ತಪ್ಪು. ನನಗೆ ಯಾಕೆ ಸಚಿವ ಸ್ಥಾನ ನೀಡಿಲ್ಲ? ಎಂದು ಪ್ರಶ್ನಿಸಿದ್ದಾರೆ.

Comments are closed.