ಕರ್ನಾಟಕ

ದೇವರಿಗೆ ಪತ್ರ; ಬೇಡಿಕೆ ಈಡೇರಿಸದಿದ್ರೆ ಆತ್ಮಹತ್ಯೆ ಮಾಡಿಕೊಳ್ತೇನೆ!

Pinterest LinkedIn Tumblr

15-knk-1ಕನಕಗಿರಿ: ನನ್ನ ಪತಿ ಕುಡಿತ ಬಿಟ್ಟು, ಚೆನ್ನಾಗಿ ದುಡಿದು ಬೇರೆಯವರ ಸಾಲ ಮುಟ್ಟಿಸಬೇಕು. ಒತ್ತೆ ಇಟ್ಟ ಬಂಗಾರವನ್ನು ಬಿಡಿಸಿಕೊಳ್ಳಬೇಕು. ಅಲ್ಲದೇ ಹತ್ತಾರು ಜನಕ್ಕೆ ಸಾಲ ಕೊಡುವ ರೀತಿಯಲ್ಲಿ ಬೆಳೆಯಬೇಕು. ಆ ರೀತಿ ಮಾಡುವ ಶಕ್ತಿ ನಿನ್ನಲ್ಲಿದ್ದು, ಈ ಕೆಲಸವನ್ನು ನೀನು ಮಾಡಬೇಕು. ಇಲ್ಲವಾದರೆ ಮಕ್ಕಳನ್ನು ನಿನ್ನ ಪಾದಗಳಿಗೆ ಹಾಕಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ.

ಹೀಗೆಂದು ಭಕ್ತೆ ಕವಿತಾ ದೇವರಿಗೆ ಪತ್ರ ಬರೆದು ಇಲ್ಲಿನ ಐತಿಹಾಸಿಕ ಕನಕಾಚಲ ದೇವಸ್ಥಾನದಲ್ಲಿನ ಕಾಣಿಕೆ
ಹುಂಡಿಯಲ್ಲಿ ಹಾಕಿದ್ದಾಳೆ. ಕಾಣಿಕೆ ಪೆಟ್ಟಿಗೆ ತೆರೆದಾಗ ಈ ಪತ್ರ ದೊರೆತಿದೆ. ನನ್ನ ಪತಿ ಎಲ್ಲ ಚಟಗಳನ್ನು ಮಾಡುತ್ತಿದ್ದು, ಹಲವರ ಬಳಿ ಸಾಲ ಮಾಡಿಕೊಂಡಿದ್ದಾರೆ. ಇದ್ದ ಬಂಗಾರವನ್ನು ಒತ್ತೆ ಇಟ್ಟಿದ್ದಾರೆ. ಈಗ ಜೀವನ ನಡೆಸುವುದು ಕಷ್ಟವಾಗಿದೆ.

ಈ ಬಗ್ಗೆ ಹಲವು ದೇವರಲ್ಲಿ ಬೇಡಿಕೊಂಡೆ ಆದರೆ ಯಾವ ದೇವರು ಕೈ ಹಿಡಿಯಲಿಲ್ಲ. ಆದರೆ ನೀನೆ ತಂದೆ, ಲಕ್ಷ್ಮಿಯೇ ತಾಯಿಯಾಗಿದ್ದು, ನಿನಗೆ ನನ್ನ ಕಷ್ಟ ಗೊತ್ತು. ಅಲ್ಲದೇ ನನ್ನ ಸಂಕಷ್ಟವನ್ನು ಬಗೆಹರಿಸುವ ಶಕ್ತಿಯೂ ನಿನ್ನಲ್ಲಿದೆ. ಇದು ನನ್ನ ಗಂಡ, ಮನೆತನದ ಮರ್ಯಾದೆ ಪ್ರಶ್ನೆಯಾಗಿದೆ. ಅಲ್ಲದೇ ಜೀವನ ಕಷ್ಟವಾಗಿರುವುದರಿಂದ ನನಗೂ ನನ್ನ ಮಕ್ಕಳಿಗೆ ಜೀವಂತವಾಗಿರಲು ಆಸೆಯಿಲ್ಲ.

ಅದಕ್ಕಾಗಿ ಶೀಘ್ರವಾಗಿ ನನ್ನ ಸಂಕಷ್ಟವನ್ನು ಬಗೆಹರಿಸು ಇಲ್ಲವಾದರೆ ನನ್ನ ಮಕ್ಕಳನ್ನು ನಿನ್ನ ಪಾದಗಳಿಗೆ ಹಾಕುತ್ತೇನೆ ಎಂದೂ ಬರೆದು ಕೊನೆಯಲ್ಲಿ ಇಂತಿ ನಿನ್ನ ನೊಂದ ಭಕ್ತೆ ಎಂದು ತನ್ನ ಹೆಸರನ್ನು ಬರೆದಿದ್ದಾಳೆ. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಧಿಕಾರಿ ನೇತೃತ್ವದಲ್ಲಿ ನಡೆದ ಕಾಣಿಕೆ ಪೆಟ್ಟಿಗೆ ಎಣಿಕೆಯಲ್ಲಿ 5,48,870 ರೂ. ಹಣವಿತ್ತು.
ಯಾವುದೇ ಬಂಗಾರ, ಬೆಳ್ಳಿ ಇರಲಿಲ್ಲ.
-ಉದಯವಾಣಿ

Comments are closed.